ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಾಳೆ ಗ್ರಾಪಂನಲ್ಲಿ ಕಸ ವಿಲೇವಾರಿ ಘಟಕಕ್ಕೆ ಚಾಲನೆ

Last Updated 15 ಜುಲೈ 2019, 19:49 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ, ನಗರಸಭೆಗಳಿಗೆ ಸೀಮಿತವಾಗಿದ್ದ ಕಸ ಸಂಗ್ರಹಣೆಯನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ಆರಂಭಿಸಿದ್ದು, ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ ಎಂದು ಹದಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ.ನಿಂಗಪ್ಪ ಅಭಿಪ್ರಾಯಪಟ್ಟರು.

ಸ್ವಚ್ಛಮೇವ ಜಯತೇ ಆಂದೋಲನದಡಿ ಕೈದಾಳೆ ಗ್ರಾಮ ಪಂಚಾಯಿತಿಯಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರಿಂದ ಆಗುತ್ತಿದ್ದ ಪರಿಸರ ಹಾನಿ ಹಾಗೂ ಭೂಮಾಲಿನ್ಯ ತಪ್ಪಿಸಲು ಈ ಕಸ ಸಂಗ್ರಹಣೆ ಕಾರ್ಯ ಆರಂಭಿಸಲಾಗಿದೆ. ಪ್ರತಿ ಮನೆಗಳಿಗೆ ತೆರಳಿ ಹಸಿ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡುವಂತೆ ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿ ಹಂತದಲ್ಲಿ ಕಸ ವಿಲೇವಾರಿ ಘಟಕ ಆರಂಭಿಸಿ ಮನೆ ಮನೆಗಳಿಂದ ಹಸಿ ಮತ್ತು ಒಣಕಸವನ್ನು ಸಂಗ್ರಹಿಸಲಾಗುತ್ತಿದ್ದು, ಪ್ರತಿ ಮನೆಗೂ ಹಸಿಕಸ ಸಂಗ್ರಹಣೆಗೆ ಕಸದ ಬುಟ್ಟಿ ಹಾಗೂ ಒಣ ಕಸ ಸಂಗ್ರಹಣೆಗೆ ನೈಲಾನ್ ಕೈಚೀಲವನ್ನು ವಿತರಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಪ್ರಸಾದ್ ವೈ.ಟಿ. ಮಾತನಾಡಿ, ‘ಸ್ವಚ್ಛಮೇವ ಜಯತೇ ಆಂದೋಲನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿದ್ದು, ಪ್ರತಿ ಮನೆಗಳಿಂದ ಕಸ ಸಂಗ್ರಹಣೆ ಆರಂಭಿಸಲಾಗಿದೆ. ಪ್ರತಿ ಮನೆಗೂ ತೆರಳಿ ಕಸ ವಿಂಗಡಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಕೈದಾಳೆ ಗ್ರಾಮದಲ್ಲಿ ಆರಂಭಿಸಿದ್ದು, ನಂತರ ಪಂಚಾಯಿತಿಯ ಉಳಿದ ಹಳ್ಳಿಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಮಾತನಾಡಿ, ‘ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿ 32 ಗ್ರಾಮ ಪಂಚಾಯಿತಿಗಳು ಘನ ತ್ಯಾಜ್ಯ ನಿರ್ವಹಣೆ ಮಾಡಲು ಆಯ್ಕೆಯಾಗಿದ್ದು, ಇದರಲ್ಲಿ ಕೈದಾಳೆ ಗ್ರಾಮ ಪಂಚಾಯಿತಿಯೂ ಒಂದು. ₹ 4.74 ಲಕ್ಷದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜಮ್ಮ ನಿಂಗಪ್ಪ, ಗೌರಮ್ಮ ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ (ಸ್ವ-ಸಹಾಯ ಸಂಘ) ಅಧ್ಯಕ್ಷ ಎಲೆಜಬೆತ್, ಖಜಾಂಚಿ ಅನ್ನಪೂರ್ಣಮ್ಮ, ಗ್ರಾಮದ ಮುಖಂಡರಾದ ಕೆ.ಎಂ.ಮಲ್ಲಿಕಾರ್ಜುನ, ಅಣ್ಣಪ್ಪ ಕಲ್ಕೆರೆ, ಎಂ.ಡಿ.ಮಲ್ಲಪ್ಪ, ಜಾಂಬುಮುನಿ ವೈ.ಆರ್. ಮುತ್ತುರಾಜ್ ಕೆ.ಎಂ. ಹೊಸನಾಯಕನಹಳ್ಳಿ ಗ್ರಾಮದ ಜಯ್ಯಣ್ಣ, ರೇವಣಸಿದ್ದಪ್ಪ, ಸಿದ್ದಾರೂಢಸ್ವಾಮಿ, ದ್ವಿತಿಯ ದರ್ಜೆ ಲೆಕ್ಕ ಸಹಾಯಕರಾದ ಪಿ.ಗಣೇಶ, ಬಿಲ್ ಕಲೆಕ್ಟರ್ ಉಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT