ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಹಿಳೆ, ಮಕ್ಕಳ ರಕ್ಷಣಗೆ ತಯಾರಾದ ದುರ್ಗಾ ಪಡೆ

Last Updated 2 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ನಿರ್ಭಯ ಯೋಜನೆಯ ಅಡಿಯಲ್ಲಿ ಬುಧವಾರ ದಾವಣಗೆರೆ ದುರ್ಗಾಪಡೆ ಆರಂಭಗೊಂಡಿದೆ. ಇಲ್ಲಿನ ಜಯದೇವ ಸರ್ಕಲ್‌ನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.

ಮಹಿಳಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಈ ದುರ್ಗಾ ತಂಡದಲ್ಲಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವ, ಶಾಲಾ ಕಾಲೇಜುಗಳಿಗೆ ಬರುವ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನು ಈ ಪಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಒಬ್ಬರು ಅಧಿಕಾರಿ ಮತ್ತು 15 ಮಂದಿ ಸಿಬ್ಬಂದಿ ದುರ್ಗಾಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸುಸಜ್ಜಿತ ವಾಹನವನ್ನೂ ಈ ಪಡೆಗೆ ನೀಡಲಾಗಿದೆ. ಕಾಲೇಜು, ಬಸ್‌ನಿಲ್ದಾಣ, ಹಾಸ್ಟೆಲ್‌ಗಳ ಸುತ್ತಮುತ್ತ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಸ್ತು ತಿರುಗಲಿದೆ. ಸ್ಥಳೀಯ ಹೆಸರು ಇರಲಿ ಎಂಬ ಕಾರಣಕ್ಕೆ ದುರ್ಗಾ ಪಡೆ ಎಂದು ಹೆಸರಿಟ್ಟಿದ್ದೇವೆ’ ಎಂದು ಈ ಪಡೆಯ ಮಾರ್ಗದರ್ಶಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.

‘ನಿರ್ಭಯ ಹೆಸರಿಗಿಂತ ದುರ್ಗಾ ಹಸರಿನಲ್ಲಿ ಹೆಚ್ಚು ಶಕ್ತಿ ಇದೆ. ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬಲು ಇದು ಉತ್ತಮ ಯೋಜನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಶ್ಲಾಘಿಸಿದರು.

ದುರ್ಗಾಪಡೆಯ ನೇತೃತ್ವ ವಹಿಸಿರುವ ಮಹಿಳಾ ಇನ್‌ಸ್ಪೆಕ್ಟರ್‌ ನಾಗಮ್ಮ, ಎಎಸ್‌ಪಿ ರಾಜೀವ್‌, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌, ಡಿವೈಎಸ್‌ಪಿ ಮಂಜುನಾಥ ಗಂಗಲ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT