ಕಡರನಾಯ್ಕನಹಳ್ಳಿ: ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ರಸ್ತೆಯ ಎಡಬಲಗಳಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಅಂಗಡಿ, ಹೋಟೆಲ್ಗಳಲ್ಲಿ 30ನ್ನು ಸೋಮವಾರ ಸಂಜೆ ವೇಳೆಗೆ ತೆರವುಗೊಳಿಸಲಾಯಿತು.

ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಅಂಗಡಿ, ಹೋಟೆಲ್ಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯವರು ಸುಮಾರು 45 ಜನ ಮಾಲೀಕರಿಗೆ ಅಂತಿಮ ನೋಟಿಸ್ ನೀಡಿದ್ದರು. ಅಲ್ಲದೇ 3 ದಿನಗಳೊಳಗೆ ಒತ್ತುವರಿ ತೆರವುಗೊಳಿಸಲಾಗುವುದು ತಮ್ಮ ತಮ್ಮ ವಸ್ತುಗಳನ್ನು ತೆಗೆದುಕೊಂಡು ಖಾಲಿ ಮಾಡಲು ಸೂಚನೆಯನ್ನೂ ಕೊಟ್ಟಿದ್ದಾಗಿ ಪಿಡಿಒ ಟಿ.ಪಿ. ರಾಮಚಂದ್ರಪ್ಪ ತಿಳಿಸಿದರು.

‘ಅಜ್ಜಯ್ಯನ ದೇವಸ್ಥಾನಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಬರುತ್ತಾರೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿಗಳು, ಹೋಟೆಲ್ಗಳು ನಿರ್ಮಿಸಿದ್ದರಿಂದ ಭಕ್ತರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು ಅದಕ್ಕಾಗಿ ತೆರವು ಕಾರ್ಯಾಚರಣೆ ನಡೆಸಿದ್ದು, ಒತ್ತುವರಿ ಮಾಡಿರುವ ಎಲ್ಲ ಅಂಗಡಿಗಳನ್ನು ತೆರವು ಮಾಡುವುದಾಗಿ’ ಗ್ರಾ.ಪಂ ಅಧ್ಯಕ್ಷೆ ಭಾರತಿ ಕಟಿಗೇರ, ಉಪಾಧ್ಯಕ್ಷ ಚಂದ್ರುಗೌಡ ಜಿಗಳಿ ವಿವರಿಸಿದರು.

ತೆರವು ಮಾಡಿದ ಕೆಲ ಅಂಗಡಿಗಳ ಟೇಬಲ್ಗಳು, ಚೇರ್ಗಳನ್ನು ಉಳಿದ ಜಾಗಗಳಲ್ಲಿ ಒಂದರ ಮೇಲೊಂದು ಇಡುತ್ತಿರುವುದು ಮತ್ತು ಕೆಲವರು ಸಾಮಗ್ರಿಗಳನ್ನು ಬೇರೆಡೆಗೆ ಹೊತ್ತೊಯ್ಯುವ ದೃಶ್ಯಗಳು ಕಂಡುಬಂದವು.

‘ಅಂಗಡಿಗಳಿಂದಲೇ ನಮ್ಮ ಜೀವನ ನಡೆಯುತ್ತಿತ್ತು ಅದನ್ನು ತೆರವುಗೊಳಿಸುತ್ತಿರುವುದು ತುಂಬಾ ದುಃಖ ತಂದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅಂಗಡಿಗಳ ಮಾಲೀಕರು ಮನವಿ ಮಾಡಿದರು.

‘ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಗ್ರಾಮದ ಹಿರಿಯರ ಸಹಕಾರದಿಂದ ಒತ್ತುವರಿ ತೆರವುನಡೆಯುತ್ತಿದೆ’ ಎಂದು ಪಿಡಿಒ ತಿಳಿಸಿದರು.

Graphic text / Statistics - ಕಡರನಾಯ್ಕನಹಳ್ಳಿ: ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ರಸ್ತೆಯ ಎಡಬಲಗಳಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಅಂಗಡಿ ಹೋಟೆಲ್ಗಳ ತೆರವು ಕಾರ್ಯಾಚರಣೆ ಸೋಮವಾರ ಆರಂಭಗೊಂಡಿದ್ದು ಸಂಜೆ ವೇಳೆಗೆ 30 ಅಂಗಡಿ ನೆಲಸಮ ಮಾಡಲಾಗಿದೆ. ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಅಂಗಡಿ ಹೋಟೆಲ್ಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯವರು ಸುಮಾರು 45 ಜನ ಮಾಲೀಕರಿಗೆ ಅಂತಿಮ ನೋಟಿಸ್ ನೀಡಿದ್ದರು. ಅಲ್ಲದೇ 3 ದಿನಗಳೊಳಗೆ ಒತ್ತುವರಿ ತೆರವುಗೊಳಿಸಲಾಗುವುದು ತಮ್ಮ ತಮ್ಮ ವಸ್ತುಗಳನ್ನು ತೆಗೆದುಕೊಂಡು ಖಾಲಿ ಮಾಡಲು ಸೂಚನೆಯನ್ನೂ ಕೊಟ್ಟಿದ್ದರು. ‘ಅಜ್ಜಯ್ಯನ ದೇವಸ್ಥಾನಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಬರುತ್ತಾರೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿಗಳು ಹೋಟೆಲ್ಗಳು ನಿರ್ಮಿಸಿದ್ದರಿಂದ ಭಕ್ತರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು ಅದಕ್ಕಾಗಿ ತೆರವು ಕಾರ್ಯಾಚರಣೆ ನಡೆಸಿದ್ದಾಗಿ’ ಗ್ರಾ.ಪಂ ಅಧ್ಯಕ್ಷೆ ಭಾರತಿ ಕಟಿಗೇರ ಉಪಾಧ್ಯಕ್ಷ ಚಂದ್ರುಗೌಡ ಜಿಗಳಿ ಪಿಡಿಒ ಟಿ.ಪಿ ರಾಮಚಂದ್ರಪ್ಪ ‘15 ವರ್ಷಗಳಿಗೂ ಹೆಚ್ಚು ಕಾಲ ನಾವು ಅಂಗಡಿಗಳನ್ನು ನಡೆಸಿಕೊಂಡು ಬಂದಿದ್ದೇವೆ.ನಮ್ಮ ಕುಟುಂಬ ಅಂಗಡಿಗಳ ಮೇಲೆಯೇ ನಿಂತಿದೆ. ಅಂಗಡಿ ಬಿಟ್ಟರೆ ಬದುಕಿಲ್ಲ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ನಾವು ತೆರವುಗೊಳಿಸುತ್ತೇವೆ’ ಎಂದು ಅಂಗಡಿಗಳ ಮಾಲೀಕರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಅವರಿಗೆ ಮನವಿ ಮಾಡಿಕೊಂಡಿದ್ದಾಗಿ ಹಲವರು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸದಸ್ಯರು ಮತ್ತು ಪಿಡಿಒ ನೇತೃತ್ವದಲ್ಲಿ ಜೆಸಿಬಿ ಮುಖಾಂತರ ಸೋಮವಾರ ಗೂಳಪ್ಪ ಬಿದರಕಟ್ಟಿ ಗದಿಗೆಪ್ಪ ಗೋವಿನಾಳುಸುಲೋಚನಮ್ಮ ಬಳೆಗಾರ ಸಂಜೀವ ರೆಡ್ಡಿ ಬಣಕಾರಅನಂತ ಪೂಜಾರ್ ಶ್ರೀಕಾಂತ್ ಪೂಜಾರ್ ಅಶೋಕ ಗೋವಿನಾಳ ಇವರುಗಳ ಅಂಗಡಿ ಹೋಟೆಲ್ ಗಳನ್ನು ತೆರವು ಗೊಳಿಸಲಾಗಿದೆ. ಉಳಿದಂತೆ ಇನ್ನೂ 30 ಕ್ಕೂ ಹೆಚ್ಚು ತೆರವುಗೊಳಿಸುವುದು ಬಾಕಿ ಇರುವುದಾಗಿ ಪಿಡಿಒ ತಿಳಿಸಿದ್ದಾರೆ. ಅಂಗಡಿ ಹೋಟೆಲ್ ಮಾಲೀಕರು ಟೇಬಲ್ ಗಳು ಚೇರ್ ಗಳನ್ನು ಉಳಿದ ತೆರವುಗೊಳಿಸಿ ಉಳಿದ ಜಾಗಗಳಲ್ಲಿ ಒಂದರ ಮೇಲೊಂದು ಇಡುತ್ತಿರುವ ಮತ್ತು ಕೆಲವರು ಸಾಮಗ್ರಿಗಳನ್ನು ಹೊತ್ತು ಬೆರೆಡೆಗೆ ಹೊತ್ತೊಯ್ಯುವ ದೃಶ್ಯಗಳು ಕಂಡುಬಂದವು. ಅಂಗಡಿಗಳಿಂದಲೇ ನಮ್ಮ ಜೀವನ ನಡೆಯುತ್ತಿತ್ತು ಅದನ್ನು ತೆರವುಗೊಳಿಸುತ್ತಿರುವುದು ತುಂಬಾ ದುಃಖ ತಂದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅಂಗಡಿಗಳ ಮಾಲಿಕರು ನಿರಾಸೆ ವ್ಯಕ್ತಪಡಿಸಿದರು. ಇದು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷ ಸದಸ್ಯರು ಗ್ರಾಮದ ಹಿರಿಯರ ಸಹಕಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಪಿಡಿಒ ಟಿ.ಪಿ ರಾಮಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.