ಭಾನುವಾರ, ಸೆಪ್ಟೆಂಬರ್ 26, 2021
27 °C

ಮತಗಟ್ಟೆ ಸಮೀಕ್ಷೆಗಳು ನಿಜ ಆಗುವುದಿಲ್ಲ: ಶಾಮನೂರು ಶಿವಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜನರ ಆದೇಶ ಯಾವ ರೀತಿ ಬರುತ್ತದೆಯೊ ಗೊತ್ತಿಲ್ಲ. ಯಾವಾಗಲು ಸಮೀಕ್ಷೆಗಳು ನಿಜ ಆಗುವುದಿಲ್ಲ. ಮೂರು ದಿವಸ ಕಾಯಿರಿ ನೋಡೋಣ...

ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಮಾಧ್ಯಮದವರಿಗೆ ಉತ್ತರಿಸಿದ್ದು ಹೀಗೆ..

ದೇವೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೋಮವಾರ ಪಾಲ್ಗೊಳ್ಳಲು ಬಂದಿದ್ದ ವೇಳೆ ಮಾತನಾಡಿದ ಅವರು ‘ಮತಗಟ್ಟೆ ಸಮೀಕ್ಷೆಗಳು ಯಾವಾಗಲು ನಿಜವಾಗಿಲ್ಲ. ಎರಡು ಸಾರಿ ತಪ್ಪಾಗಿವೆ. ಬರಲಿ ನೋಡೋಣ’ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಗೆ ‘ಅದು ಏನೋ ಗೊತ್ತಿಲ್ಲ. ಆ ಬಗ್ಗೆ ನನ್ನನ್ನು ಏನು ಕೇಳಬೇಡಿ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು