ಹೊಸಕೋಟೆ ಗ್ರಾಮ: ಮಗನಿಂದಲೇ ಕುಡುಕ ತಂದೆಯ ಕೊಲೆ

ಶುಕ್ರವಾರ, ಏಪ್ರಿಲ್ 19, 2019
23 °C

ಹೊಸಕೋಟೆ ಗ್ರಾಮ: ಮಗನಿಂದಲೇ ಕುಡುಕ ತಂದೆಯ ಕೊಲೆ

Published:
Updated:

ಉಚ್ಚಂಗಿದುರ್ಗ: ಕುಡಿದ ಮತ್ತಿನಲ್ಲಿ ತಾಯಿಯೊಂದಿಗೆ ದಿನಾಲೂ ಜಗಳ ಮಾಡುತ್ತಿರುವುದರಿಂದ ಸಿಟ್ಟಿಗೆದ್ದ ಮಗನೊಬ್ಬ ಸಮೀಪದ ಹೊಸಕೋಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಹೊಸಕೋಟೆಯ ನಾಗಪ್ಪ (48) ಕೊಲೆಯಾದವರು. ಶ್ರೀಧರ (23) ಹಾಗೂ ಚನ್ನಮ್ಮ(43) ಬಂಧಿತ ಆರೋಪಿಗಳು.

ನಾಗಪ್ಪ ಕುಡಿದ ಅಮಲಿನಲ್ಲಿ ಭಾನುವಾರ ರಾತ್ರಿ ಪತ್ನಿ ಚನ್ನಮ್ಮ ಜೊತೆ ಜಗಳ ಮಾಡಿದ್ದಾರೆ. ಈ ಬಗ್ಗೆ ಮಗ ಶ್ರೀಧರ್‌ಗೆ ದೂರವಾಣಿ ಕರೆ ಮಾಡಿ ಚನ್ನಮ್ಮ ಅಳಲು ತೋಡಿಕೊಂಡಿದ್ದಾರೆ. ಶ್ರೀಧರ್ ಮನೆಗೆ ಬಂದಾಗ ತಂದೆ–ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಆಕ್ರೋಶಗೊಂಡ ಶ್ರೀಧರ್ ಕಣಗ ತೆಗೆದುಕೊಂಡು ನಾಗಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ನಾಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅರಸೀಕೆರೆ ಠಾಣೆ ಪೊಲೀಸರು ರಾತ್ರಿಯೇ ಆರೋಪಿಗಳಾದ ಶ್ರೀಧರ್ ಹಾಗೂ ಚನ್ನಮ್ಮ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಾಗಪ್ಪ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದರು. ಪದವಿ ಓದಿದ ಬಳಿಕ ಶ್ರೀಧರ್ ಟೈಲರಿಂಗ್‌ ಮೂಲಕ ಕುಟುಂಬ ನಡೆಸುತ್ತಿದ್ದರು ಎನ್ನಲಾಗಿದೆ.

ಹರಪನಹಳ್ಳಿ ಸಿಪಿಐ ದುರುಗಪ್ಪ, ಅರಸೀಕೆರೆ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಪುಷ್ಪಲತಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !