ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಗುಡ್‌ ಫ್ರೈಡೆ ಆಚರಣೆ

Last Updated 10 ಏಪ್ರಿಲ್ 2020, 16:41 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಶುಕ್ರವಾರ ಕ್ರೈಸ್ತ ಸಮುದಾಯದವರು ಗುಡ್‌ ಫ್ರೈಡೆಯನ್ನು ಮನೆಯಲ್ಲೇ ಆಚರಿಸಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ಆಚರಣೆ ನಡೆಯಲಿಲ್ಲ.

ಯೇಸು ಸಾವಿನಲ್ಲಿ ಜಯ ಕಂಡ ದಿನ ಇದು. ಕ್ರೈಸ್ತರು ಇದನ್ನು ಶುಭ ಶುಕ್ರವಾರ ಎಂದು ಕರೆಯುತ್ತಾರೆ.ಶುಕ್ರವಾರ ಸೂರ್ಯೋದಯದಿಂದ ಸೂರ್ಯಾಸ್ತ ಆಗುವವರೆಗೆ ಯಾವುದೇ ಆಹಾರ ಸೇವಿಸದೆ ಜನರು ಉಪವಾಸ ಆಚರಿಸಿದರು.ಸಂಜೆ ಮನೆಯಲ್ಲಿಯೇ ಕುಟುಂಬದ ಸದಸ್ಯರಷ್ಟೇ ಕುಳಿತು ಪ್ರಾರ್ಥನೆ ಸಲ್ಲಿಸಿ, ಯೇಸುವನ್ನು ಸ್ಮರಿಸಿದರು.

ಧರ್ಮಗುರುಗಳು ಚರ್ಚ್‌ನಲ್ಲಿಪ್ರಾರ್ಥನೆ ಮಾಡಿದರು. ಯೇಸು ಶಿಲುಬೆಗೆ ಏರಿದ ದಿನವಾದ ಕಾರಣ ಇಂದು ಯಾವುದೇ ಸಂಭ್ರಮಾಚರಣೆ ನಡೆಯಲಿಲ್ಲ. ಧರ್ಮಗುರುಗಳ ಸಂದೇಶಗಳನ್ನು ಯೂಟ್ಯೂಬ್‌, ವಾಟ್ಸ್‌ಆ್ಯಪ್‌ ಮೂಲಕ ನೀಡಲಾಯಿತು.

‘ಮೊದಲು ಅವಮಾನದ ಸಂಕೇತವಾಗಿದ್ದ ಶಿಲುಬೆಗೆ ಏರಿ ಅದಕ್ಕೆ ವಿಜಯದ ಸಂಕೇತ ನೀಡಿದವರು ಪ್ರಭು ಯೇಸು. ಆ ದಿನದ ಕಾರಣ 40 ದಿನಗಳ ಕಾಲ ಸಮುದಾಯದವರು ಉಪವಾಸ ಆಚರಿಸುತ್ತಾರೆ. ಆಹಾರ ತ್ಯಜಿಸಿ ಉಪವಾಸ ಮಾಡಿ ಉಳಿದ ಹಣವನ್ನು ನಿರ್ಗತಿಕರಿಗೆ ಈ ದಿನ ದಾನ ಮಾಡುತ್ತಾರೆ. ಬಹುತೇಕರು ಅಕ್ಕಪಕ್ಕದ ಬಡವರಿಗೆ ಊಟ, ದವಸ–ಧಾನ್ಯ ನೀಡಿ ಆಚರಿಸಿದರು. ಮನೆಯಲ್ಲಿಯೇ ಪ್ರಾರ್ಥಿಸಿದರು’ ಎಂದು ಸಂತ ಥಾಮಸರ ದೇವಾಲಯ ಧರ್ಮಗುರು ಫಾದರ್ ಸ್ವೀವನ್‌ ಡೆಸಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT