ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕೊಂದವರ ಕೈಯಲ್ಲಿ ಆಡಳಿತ: ಬಸವರಾಜ್‌

Last Updated 3 ಅಕ್ಟೋಬರ್ 2022, 4:05 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಅಹಿಂಸಾ ಮಾರ್ಗದ ಮೂಲಕ ಭಾರತ ದೇಶದ ಸ್ವಾತಂತ್ರ್ಯ ಪಡೆದಿರುವುದು ಇತಿಹಾಸ. ಆದರೆ ಇಂದು ಗಾಂಧೀಜಿ ಹಂತಕ ಗೋಡ್ಸೆಯ ಹಿಂಬಾಲಕರ ಕೈಯಲ್ಲಿ ದೇಶದ, ರಾಜ್ಯದ ಆಡಳಿತವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ಡಿ . ಬಸವರಾಜ ಹೇಳಿದರು.

ಎಂಸಿಸಿ ‘ಎ’ ಬ್ಲಾಕ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟಾಕ್ ವಿಭಾಗದಿಂದ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಬಡತನವನ್ನು ಕಣ್ಣಾರೆ ಕಂಡು ಸರಳ ಜೀವನ ನಡೆಸಿದ ಗಾಂಧೀಜಿ ಭಾರತೀಯರಿಗೆ ಆದರ್ಶ. ₹ 10 ಲಕ್ಷದ ಸೂಟುಬೂಟು ತೊಟ್ಟವರಲ್ಲ ಎಂದು ಟೀಕಿಸಿದರು.

ಕೋಮುವಾದಿಗಳು ಗಾಂಧೀಜಿಯನ್ನು ಕೊಂದಿರಬಹುದು. ಗಾಂಧೀಜಿಯವರ ಆದರ್ಶಗಳನ್ನು ಕೊಲ್ಲಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಹಾಗೂ ಗಣೇಶ ಉತ್ಸವದ ಮೆರವಣಿಗೆಗಳಲ್ಲಿ ದೇಶದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯ ಭಾವಚಿತ್ರವನ್ನು ಪ್ರದರ್ಶನ ಮಾಡುತ್ತಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುತ್ತಾರೆಯೇ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಪಾಲಿಕೆಯ ಸದಸ್ಯ ಕೆ. ಚಮನ್ ಸಾಬ್‍, ‘ಇತಿಹಾಸ ಓದದ ಯುವಕರು ಗಾಂಧಿಯನ್ನು ಕೊಂದ ಗೋಡ್ಸೆ ಭಾವಚಿತ್ರ ಹಿಡಿದು ಪ್ರದರ್ಶನ ಮಾಡುತ್ತಿರುವುದು ಈ ದೇಶದ ದುರಂತ’ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಕಾಂಗ್ರೆಸ್ ಇನ್‍ಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಡೋಲಿ ಚಂದ್ರು, ಮುಖಂಡರಾದ ಕೆ.ಜಿ. ರಹಮತ್‍ವುಲ್ಲಾ, ಎನ್.ಎಸ್. ವೀರಭದ್ರಪ್ಪ, ಕೊಡಪಾನ ದಾದಾಪೀರ್, ಜಿ.ಎಲ್. ಚಂದ್ರಶೇಖರ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಬಿ.ಹೆಚ್. ಉದಯಕುಮಾರ್, ಗಿರಿಧರ್ ಸಾತಾಳ್, ಎ.ಜಾನ್, ಸಲ್ಮಾಬಾನು, ಕೆ. ನಾಗರಾಜ್ ಮುಬಾರಕ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT