ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಐರಣಿಶ್ರೀ ಅಡ್ಡಪಲ್ಲಕ್ಕಿ ಉತ್ಸವ

Last Updated 14 ನವೆಂಬರ್ 2022, 4:06 IST
ಅಕ್ಷರ ಗಾತ್ರ

ಹರಿಹರ: ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಲಿಂಗೈಕ್ಯ ಮುಪ್ಪಿನಾರ್ಯ ಶ್ರೀಗಳ ಅಮೃತ ಶಿಲಾಮೂರ್ತಿಯ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನೇರವೇರಿತು.

ಇಲ್ಲಿನ ಹರಪನಹಳ್ಳಿ ರಸ್ತೆಯ ಎ.ಕೆ. ಕಾಲೊನಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಬಸವರಾಜ ದೇಶಿಕೇಂದ್ರ ಶ್ರೀ ಅಡ್ಡಪಲ್ಲಕ್ಕಿಯನ್ನು ಭಕ್ತರು ಹೆಗಲ ಮೇಲೆ ಹೊತ್ತು ಸಾಗಿದರು. ಲಿಂಗೈಕ್ಯ ಮುಪ್ಪಿನಾರ್ಯ ಶ್ರೀಅಮೃತ ಶಿಲಾಮೂರ್ತಿಯನ್ನು ಸಾರೋಟಿನಲ್ಲಿಟ್ಟು ಮೆರವಣಿಗೆಯಲ್ಲಿ ಶಾಖಾ ಮಠಕ್ಕೆ ಕರೆತರಲಾಯಿತು.

ಆನೆ ಅಂಬಾರಿ, ವೀರಗಾಸೆ, ಡೊಳ್ಳು, ಹಲಗೆ, ಕೀಲು ಗೊಂಬೆ, ನಂದಿಕೋಲು ಮುಂತಾದ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ ವಿತರಿಸಲಾಯಿತು.

ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಎಚ್.ಎಸ್. ಶಿವಶಂಕರ್, ನಗರಸಭಾ ಸದಸ್ಯರಾದ ಪಿ.ಎನ್. ವಿರೂಪಾಕ್ಷ, ಶಂಕರ ಖಟಾವ್‌ಕರ್, ಎನ್.ರಜನಿಕಾಂತ್, ಆಟೊ ಹನುಮಂತಪ್ಪ, ಮಾಜಿ ಸದಸ್ಯರಾದ ನಾಗರಾಜ್ ಮೆರ‍್ವಾಡೆ, ಅಮರಾವತಿ ರೇವಣಸಿದ್ದಪ್ಪ, ಎಂ.ಬಿ. ಅಣ್ಣಪ್ಪ, ಮುಖಂಡರಾದ ಎಂ. ನಾಗೇಂದ್ರಪ್ಪ, ಎನ್.ಎಚ್. ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಕುಣೆಬೆಳಕೆರೆ ದೇವೇಂದ್ರಪ್ಪ, ಎಚ್.ನಿಜಗುಣ, ಎಂ.ಎನ್.ಶಿವಲಿಂಗಪ್ಪ, ಎಚ್. ನಾಗಭೂಷಣ, ಸಿ.ಎನ್.ಹುಲಿಗೇಶ್, ಸತೀಶ್ ಮಲ್ಲನಗೌಡ, ಎನ್.ಇ.ಸುರೇಶ್ ಸ್ವಾಮಿ, ರಾಜು ಐರಣಿ, ನಾಗರಾಜ್ ಐರಣಿ, ರೂಪಾ ಕಾಟ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT