ಹರಿಹರ: ನಗರದಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ ಇಲ್ಲಿನ ಕನ್ನಡ ಭವನ ಹೋರಾಟ ಸಮಿತಿ ಪದಾಧಿಕಾರಿಗಳು ಶಾಸಕ ಬಿ.ಪಿ.ಹರೀಶ್ ಹಾಗೂ ನಗರಸಭೆ ಪ್ರಭಾರ ಪೌರಾಯುಕ್ತ ವಿನಯ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲೆಯ 2ನೇ ದೊಡ್ಡ ನಗರವಾಗಿರುವ ಹರಿಹರ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆ ಮಾಡಲು ಸುಸಜ್ಜಿತ ರಂಗಮಂಟಪ ಅಥವಾ ಕನ್ನಡ ಭವನ ಇಲ್ಲ. 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯದಂತೆ, ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಸರ್ಕಾರವು ಶೀಘ್ರವೇ ನಿವೇಶನ ಗುರುತಿಸಿ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಶಾಸಕ ಹರೀಶ್ ನೀಡಿ, ಉದ್ದೇಶಿತ ನಿವೇಶನವನ್ನು ವೀಕ್ಷಿಸಿದರು.

ಸಮಿತಿ ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ, ಅಧ್ಯಕ್ಷ ಎಚ್.ನಿಜಗುಣ, ಪ್ರಧಾನ ಕಾರ್ಯದರ್ಶಿ ಶೇಖರಗೌಡ ಪಾಟೀಲ್, ಖಜಾಂಚಿ ಕೆ.ಬಿ.ರಾಜಶೇಖರ್, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಸದಸ್ಯರಾದ ಅಜಿತ್ ಸಾವಂತ್, ವೈ.ಕೃಷ್ಣಮೂರ್ತಿ, ಜಿ.ಶಂಕರ್ಮೂರ್ತಿ, ಟಿ.ಎಂ. ಶಿವಕುಮಾರ್, ಗುರುಮೂರ್ತಿ, ವೈ.ಬಿ.ಪ್ರಭಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.