ಸೋಮವಾರ, ನವೆಂಬರ್ 18, 2019
22 °C

ಮಹಿಳೆಯೊಂದಿಗೆ ಅನುಚಿತ ವರ್ತನೆ: ಎಎಸ್‌ಐಗೆ ಥಳಿತ

Published:
Updated:
Prajavani

ದಾವಣಗೆರೆ/ಮಾಯಕೊಂಡ: ಮಹಿಳೆಯೊಂದಿಗೆ ಅನುಚಿತ ವರ್ತಿಸಿದ್ದಾರೆ ಎಂದು ಆರೋಪಿಸಿ ಮಾಯಕೊಂಡ ಗ್ರಾಮಸ್ಥರು ಎಎಸ್‌ಐ ಓಬಳೇಶ ನಾಯಕಗೆ ಥಳಿಸಿದ್ದಾರೆ. 

ಗ್ರಾಮದಲ್ಲಿ ವಿಜಯ ಯುವಕ ಸಂಘದ ಗಣೇಶ ಮೂರ್ತಿ ವಿಸರ್ಜನೆ ವೀಕ್ಷಿಸಲು ಜನ ಕೇರಿಯಿಂದ ಹೊರಹೋದಾಗ ಒಬಳೇಶ ನಾಯಕ ಅವರು ಮನೆಯಲ್ಲಿದ್ದ ಮಹಿಳೆಯೊಂದಿಗೆ ‍ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಮಹಿಳೆಯ ಸಂಬಂಧಿಕರು ಹಿಗ್ಗಾ ಮಗ್ಗಾ ಥಳಿಸಿದ್ದಾರೆ. ಈ ಫೋಟೊ ಹರಿದಾಡುತ್ತಿದೆ.

ಹಲ್ಲೆಗೊಳಗಾದ ಓಬಳೇಶನಾಯಕ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಮಹಿಳೆ ದೂರು ನೀಡಲು ಠಾಣೆಗೆ ಬಂದರೂ ದೂರಿನ ಖಚಿತ ಮಾಹಿತಿ ದೊರೆತಿಲ್ಲ.

ಎಸ್ಪಿ ಹನುಮಂತರಾಯ, ಎಎಸ್‌ಪಿ ರಾಜೀವ್‌, ಡಿವೈಎಸ್ಪಿ ಮಂಜುನಾಥ್ ಕೆ.ಗಂಗಲ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.

‘ಅನುಚಿತವಾಗಿ ವರ್ತಿಸುತ್ತಿದ್ದಾಗ ಗ್ರಾಮಸ್ಥರು ಥಳಿಸಿದ್ದಾರೆ ಎಂಬ ಮಾಹಿತಿ ಬಂದಿದ್ದು, ವಿವರಗಳನ್ನು ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)