ಶನಿವಾರ, ಜುಲೈ 31, 2021
28 °C
ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ಮಕ್ಕಳು, ನಾಲ್ವರು ಹಿರಿಯರು

ದಾವಣಗೆರೆ: 34 ಮಕ್ಕಳಿಗೆ, 30 ಹಿರಿಯರಿಗೆ ಸೋಂಕು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಕಾಣಿಸಿಕೊಂಡ ಒಟ್ಟು ಕೊರೊನಾ ಸೋಂಕಿತರಲ್ಲಿ 18 ವರ್ಷಕ್ಕಿಂತ ಕೆಳಗಿನವರು 34 ಮಂದಿ ಇದ್ದರೆ, 50 ದಾಟಿದ ಹಿರಿಯರ ಸಂಖ್ಯೆ 30 ಆಗಿದೆ. ಉಳಿದ 122 ಮಂದಿ 18ರಿಂದ 50 ವರ್ಷದ ಒಳಗಿನವರು ಆಗಿದ್ದಾರೆ.

34 ಮಕ್ಕಳಲ್ಲಿ 30 ಮಂದಿ ಬಿಡುಗಡೆಯಾಗಿದ್ದಾರೆ. ಎರಡೂವರೆ ತಿಂಗಳ ಹೆಣ್ಣು ಮಗು, 1 ವರ್ಷದ ಗಂಡು ಮಗು, 5 ಮತ್ತು 14 ವರ್ಷದ ಬಾಲಕಿಯರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಈ ಎಲ್ಲರೂ ಜೂನ್‌ ತಿಂಗಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟವರು.

50 ವರ್ಷಕ್ಕಿಂತ ಮೇಲಿನ 30 ಮಂದಿಯಲ್ಲಿ ಇನ್ನು ಐವರಷ್ಟೇ ಬಿಡುಗಡೆಯಾಗಬೇಕಿದೆ. 50 ವರ್ಷದ ಮೇಲಿನವರಲ್ಲಿ ಐವರು ಮೃತಪಟ್ಟಿದ್ದಾರೆ. 20 ಮಂದಿ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಐವರು ಜೂನ್‌ 3ರ ಬಳಿಕ ಸೋಂಕು ಇರುವುದು ಖಚಿತಗೊಂಡವರು. ಗುಣಮುಖರಾದವರಲ್ಲಿ 73 ವರ್ಷದ ಮಹಿಳೆ, 70 ವರ್ಷದ ಇಬ್ಬರು ಪುರುಷರು, 60 ವರ್ಷ ಮೀರಿದ 11 ಮಹಿಳೆಯರು, ಇಬ್ಬರು ಪುರುಷರು ಸೇರಿದ್ದಾರೆ.

18ರಿಂದ 50 ವರ್ಷದ ಒಳಗಿನ 122 ಮಂದಿಯಲ್ಲಿ 48 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 100 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 22 ಮಂದಿಯಷ್ಟೇ ಆಸ್ಪತ್ರೆಯಲ್ಲಿದ್ದಾರೆ.

‘ಸೋಂಕು ಬಂದ ಕೂಡಲೇ ನಮ್ಮ ಬಳಿ ಬಂದರೆ ಅತ್ಯಂತ ಕಾಳಜಿ ಮತ್ತು ಕಳಕಳಿಯಿಂದ ಚಿಕಿತ್ಸೆ ಮಾಡಿಸಿ, ಸೋಂಕಿನಿಂದ ಮುಕ್ತರನ್ನಾಗಿ ಮಾಡಿ ಅವರನ್ನು ಮನೆಗೆ ಕಳುಹಿಸಿ ಕೊಡುತ್ತಿದ್ದೇವೆ ಎಂಬುದಕ್ಕೆ ಈಗ ಬಿಡುಗಡೆಯಾಗಿರುವ ಮಕ್ಕಳು, ಹಿರಿಯರೆನ್ನದೇ ಎಲ್ಲ ವಯೋಮಾನದವರು ಸಾಕ್ಷಿಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೃತಪಟ್ಟವರಲ್ಲಿ ಹೆಚ್ಚಿನವರು ಇತರ ಕಾಯಿಲೆಯಿಂದ ಬಳಲುತ್ತಿದ್ದವರಾಗಿದ್ದು, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದೇ ತಡವಾಗಿ ಬಂದಿದ್ದರಿಂದ ಜೀವ ಉಳಿಸಿಕೊಳ್ಳಲಾಗಲಿಲ್ಲ’ ಎಂದು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು