ದಾವಣಗೆರೆ: ‘ನನಗೆ ವಿಜ್ಞಾನ ವಿಭಾಗದಲ್ಲಿ ಓದುವ ಹಂಬಲ. ಆದರೆ, ಆ ಸಮಯದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಅನಿವಾರ್ಯವಾಗಿ ವಾಣಿಜ್ಯ (ಬಿ.ಕಾಂ) ಪದವಿ ಓದಬೇಕಾಯಿತು. ಹಲವು ಬಾರಿ ಪ್ರಯತ್ನಿಸಿದರೂ ಸಿಎ ಕೋರ್ಸ್ ಪಾಸಾಗಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಪದವಿಗೆ ಸೇರಿದೆ. ಆದರೆ ಅಲ್ಲಿ ಯಶಸ್ಸು ಕಂಡೆ..’

ದಾವಣಗೆರೆ ವಿಶ್ವವಿದ್ಯಾಲಯದ 2024–25ನೇ ಸಾಲಿನ ಸ್ನಾತಕೋತ್ತರ ವಿಭಾಗದಲ್ಲಿ 7 ಚಿನ್ನದ ಪದಕಗಳಿಗೆ ಮುತ್ತಿಕ್ಕಿರುವ ನಯನಾ ಎನ್.ಬಿ. ಅವರ ಮಾತುಗಳಿವು.

ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ ಅಜ್ಜಿಯ ಆಸರೆಯಲ್ಲಿ ಬೆಳೆದು, ಓದಿ ಎಂಕಾಂನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಅವರು, ದಾವಣಗೆರೆ ವಿಶ್ವವಿದ್ಯಾಯದ ‘ಚಿನ್ನದ ಹುಡುಗಿ’ ಎನಿಸಿಕೊಂಡಿದ್ದಾರೆ.

‘ಯಾವುದೇ ಕೆಲಸವಾಗಲಿ, ಅದನ್ನು ನಿಷ್ಠೆಯಿಂದ ಮಾಡುವುದು ನನ್ನ ಸಿದ್ಧಾಂತ. ಎರಡು ಅಥವಾ ಮೂರನೇ ರ್ಯಾಂಕ್ ನಿರೀಕ್ಷಿಸಿದ್ದ ನನಗೆ ಮೊದಲ ರ್ಯಾಂಕ್ ಬಂದಿದ್ದು ಅಚ್ಚರಿ ಮೂಡಿಸಿತು’ ಎಂದು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಂದೆ ಭರಮನ ಗೌಡ, ತಾಯಿ ಮೀನಾಕ್ಷಿ ಹರಿಹರ ಸಮೀಪದ ಜಿಗಳಿಯಲ್ಲಿದ್ದಾರೆ. ಅಜ್ಜಿ ರತ್ನಮ್ಮ ಜೊತೆ ದಾವಣಗೆರೆಯಲ್ಲಿ ವಾಸವಿರುವ ನಯನಾ, ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಆರಂಭಿಕ ಶಿಕ್ಷಣ, ನಂತರ ಎವಿಕೆ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ಕನ್ನಡದಲ್ಲಿ ಚಿನ್ನದ ಪದಕ:

‘ಇರುವ ಒಂದೆಕರೆ ಜಮೀನು, ಜೀವನೋಪಾಯಕ್ಕೆ ಆಗಾಗ್ಗೆ ಸಣ್ಣಪುಟ್ಟ ಅಡುಗೆ ಕೆಲಸ ಮಾಡಿಕೊಂಡಿರುವ ಅಪ್ಪನಿಗೆ ಅಕ್ಕ ಹಾಗೂ ನನ್ನನ್ನು ಓದಿಸುವ ಹಂಬಲ. ಊರಿನಿಂದ ಅಂದಾಜು 40 ಕಿಲೋಮೀಟರ್ ದೂರದ ವಿಶ್ವವಿದ್ಯಾಲಯದಕ್ಕೆ ದಿನವೂ ಬಂದು ಹೋಗುತ್ತಿದ್ದೆ. ಕಷ್ಟವಿದ್ದರೂ ಚೆನ್ನಾಗಿ ಓದಿ ಚಿನ್ನದ ಪದಕವನ್ನೇ ಜಯಿಸಬೇಕು ಎಂಬುದು ನನ್ನ ಹಟ. ಅಂದು ಇಟ್ಟುಕೊಂಡಿದ್ದ ಗುರಿಯನ್ನು ಸಾಧಿಸಿದ ಹೆಮ್ಮೆ ನನ್ನದು’ ಎಂಬುದು ಅನುಷಾ ಎಂ.ಎಂ. ಅವರ ನುಡಿ.

ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಇರು ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

‘ಪದವಿಗೆ ಸೇರಿದಾಗ ನನ್ನ ಮದುವೆ ನಿಶ್ಚಿತಾರ್ಥ ನಡೆಯಿತು. ಪರೀಕ್ಷೆಗೆ ಒಂದು ತಿಂಗಳಿದ್ದಾಗ ನನ್ನ ಮದುವೆ ಆಯಿತು. ಮನೆಯವರು, ಪತಿಯ ಬೆಂಬಲದಿಂದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದೆ. ಯಶಸ್ವಿಯೂ ಆದೆ. ಮುಂದೆ ಸಹಾಯಕ ಪ್ರಾಧ್ಯಾಪಕಿಯಾಗುವ ಆಸೆಯಿದೆ’ ಎಂದು ತಮ್ಮ ಕನಸನ್ನು ಅವರು ತೆರೆದಿಟ್ಟರು.

ನಾಲ್ಕು ಪದಕ: ಎಂಬಿಎ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ದೀಪಾ ಆರ್. ಅವರು ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರಿ. ಚಾಣಕ್ಯ ಅಕಾಡೆಮಿಯಲ್ಲಿ ಪದವಿ ಪೂರೈಸಿದ್ದಾರೆ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕರು ನೀಡಿದ ಮಾರ್ಗದರ್ಶನವನ್ನು ಅವರು ಸ್ಮರಿಸುತ್ತಾರೆ.

ಅರ್ಥಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಕೋನೇನ್ ತಬಸ್ಸುಮ್ ಅವರು ದಾವಣಗೆರೆಯ ಚೌಕಿಪೇಟೆ ನಿವಾಸಿ. ತಂದೆ ಉದ್ಯಮಿ. ಐಇಎಸ್, ಐಆರ್ಎಸ್ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ಇಚ್ಛೆ ಹೊಂದಿರುವ ಅವರು, ಆಸಕ್ತಿಯಿಂದಲೇ ಅರ್ಥಶಾಸ್ತ್ರ ಆಯ್ದುಕೊಂಡು, ಮೂರು ಪದಕಗಳನ್ನು ಪಡೆದಿದ್ದಾರೆ.

ಹಿರಿಯೂರಿನ ಐಮಂಗಲದ ಚಂದನ್ ವಿ.ಎಂ. ಪತ್ರಿಕೋದ್ಯಮದಲ್ಲಿ ಮೊದಲ ರ್ಯಾಂಕ್ ಪಡೆದು ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಬೆಳಿಗ್ಗೆ ವೇಳೆ ಮನೆಗಳಿಗೆ ಪತ್ರಿಕೆ ವಿತರಿಸುತ್ತಲೇ ಶ್ರದ್ಧೆಯಿಂದ ಓದಿದ ಅವರು, ಪತ್ರಿಕಾ ಏಜೆಂಟ್ ಆಗಿರುವ ತಂದೆಯ ಆಸೆಯಂತೆ ಪತ್ರಿಕೋದ್ಯಮ ಪದವಿ ಆಯ್ದುಕೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ.

ಚಿನ್ನ ಗಳಿಸಿದ ಕೇರಳದ ಹುಡುಗಿ!

‘ಪೊಲೀಸ್ ಅಧಿಕಾರಿ ಆಗುವ ಆಸೆಯಿತ್ತು. ಆದರೆ ಹುದ್ದೆಗೆ ಅಗತ್ಯದಷ್ಟು ಎತ್ತರ ನಾನಿರಲಿಲ್ಲ. ಯಾವುದೇ ರೀತಿಯಲ್ಲಾದರೂ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್ ವಿಷಯ ಆಯ್ದುಕೊಂಡೆ’ ಎನ್ನುವ ಕೇರಳದ ಎರ್ನಾಕುಲಂನ ಐಶ್ವರ್ಯಾ ಒ.ಎಸ್. ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ.

ಸದ್ಯ ದೆಹಲಿಯ ಶೆರ್ಲಾಕ್ ಇನ್ಸ್ಟಿಟ್ಯೂಟ್ ಆಫ್ ಫೊರೆನ್ಸಿಕ್ ಸೈನ್ಸ್ನಲ್ಲಿ ಕೆಲಸ ಮಾಡುತ್ತಿರುವ ಅವರು, ಮುಂದೆ ಫೊರೆನ್ಸಿಕ್ ಸೈಂಟಿಸ್ಟ್ ಆಗುವ ಹಂಬಲದಲ್ಲಿದ್ದಾರೆ.

ಸಂಶೋಧನೆಯತ್ತ ಆಸಕ್ತಿ:

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಬಯೊ ಟೆಕ್ನಾಲಜಿಯಲ್ಲಿ ಮೊದಲ ರ್ಯಾಂಕ್ ಪಡೆದಿರುವ ಚಿತ್ರದುರ್ಗದ ಸತ್ಯಮೂರ್ತಿ ಎಸ್. ಅವರು ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಮೈಸೂರಿನ ಜೆಎಸ್ಎಸ್ ವಿಶ್ವವಿದ್ಯಾಲಯದಲ್ಲಿ ನ್ಯುರೋಸೈನ್ಸ್ ವಿಭಾಗದಲ್ಲಿ ಪಿಎಚ್.ಡಿ ಮಾಡುತ್ತಿರುವ ಅವರು, ಸಿಎಸ್ಐಆರ್ ಫೆಲೋಶಿಪ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 183ನೇ ರ್ಯಾಂಕ್ ಪಡೆದು ಫೆಲೋಶಿಪ್ಗೆ ಆಯ್ಕೆಯಾಗಿದ್ದಾರೆ.

‘ಸಂಶೋಧನೆಯಲ್ಲಿ ಆಸಕ್ತಿ ಇದ್ದುದರಿಂದ, ವೈದ್ಯಕೀಯ ಕೋರ್ಸ್ ಬದಲು ಎಂಎಸ್ಸಿ ಆಯ್ದುಕೊಂಡೆ’ ಎಂದು ಅವರು ತಿಳಿಸಿದರು.

ಇವರ ತಂದೆ ಶ್ರೀನಿವಾಸ್, ಚಿತ್ರದುರ್ಗದ ಎಪಿಎಂಸಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.