ಬುಧವಾರ, ನವೆಂಬರ್ 20, 2019
21 °C

ಕೆಲಸದ ಒತ್ತಡ: ಎಸ್‌ಬಿಐ ಮ್ಯಾನೇಜರ್ ಆತ್ಮಹತ್ಯೆ

Published:
Updated:
Prajavani

ಕಾರ್ಗಲ್: ಸಮೀಪದ ಜೋಗದ ಎಸ್‌ವಿಪಿ ಕಾಲೊನಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಮ್ಯಾನೇಜರ್ ಅನಿಲ್ ಕುಮಾರ್ (31) ಶನಿವಾರ ಬೆಳಿಗ್ಗೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಪತ್ನಿ ಹಾಗೂ ಮೂರು ವರ್ಷದ ಮಗುವಿದೆ. ಕಡೂರು ನಿವಾಸಿಯಾಗಿದ್ದ ಅನಿಲ್ ಕುಮಾರ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ವರ್ಷದಿಂದ ಎಸ್‌ಬಿಐನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅ.17ರಿಂದ ಬ್ಯಾಂಕಿನಲ್ಲಿ ಲೆಕ್ಕಪರಿಶೋಧನೆ ಕಾರ್ಯ ನಡೆಯುತ್ತಿತ್ತು. ಕೆಲಸದ ಒತ್ತಡದಿಂದಾಗಿ ಅನಿಲ್‌ ರಜೆಯಲ್ಲಿದ್ದರು. ಶನಿವಾರ ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದು, ತಮ್ಮ ಕೊಠಡಿಯಲ್ಲಿ ಗ್ರಾಹಕರೊಂದಿಗೆ ಮಾತನಾಡುತ್ತಿದ್ದರು. ತುರ್ತಾಗಿ ಕೆಲಸವಿದೆ, ಮನೆಗೆ ಹೋಗಿ ಬರುವುದಾಗಿ ಗ್ರಾಹಕರಿಗೆ ಹೇಳಿದ್ದರು. ಮನೆಗೆ ಬಂದ ಅನಿಲ್‌ ಅವರು, ‘ಮಾರುಕಟ್ಟೆಗೆ ಒಳ್ಳೆಯ ತರಕಾರಿ ಬಂದಿದೆ. ತೆಗೆದುಕೊಂಡು ಬಾ’ ಎಂದು ಹೆಂಡತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಹೆಂಡತಿ ವಾಪಸ್ಸಾಗುವುದರ ಒಳಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡುವ ಇಂಗಿತವನ್ನು ಅನಿಲ್‌ ತಮ್ಮ ಸ್ನೇಹಿತರ ಬಳಿ ವ್ಯಕ್ತಪಡಿಸಿದ್ದರು ಎಂದು ಅವರ ಆಪ್ತ ಬಳಗ ತಿಳಿಸಿದೆ.

ಜೋಗ ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌ ನಿರ್ಮಲಾ ತನಿಖೆ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)