ಭಾನುವಾರ, ಆಗಸ್ಟ್ 1, 2021
27 °C

ನಿಯಮ ಉಲ್ಲಂಘನೆ: ಮೇಯರ್‌ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲಾಕ್‌ಡೌನ್ ನಡುವೆಯೂ ಮಾಸ್ಕ್ ಇಲ್ಲದೇ, ಅಂತರ ಕಾಯ್ದುಕೊಳ್ಳದೇ ಜನ್ಮದಿನ ಆಚರಿಸಿಕೊಂಡ ಮೇಯರ್ ಬಿ.ಜಿ. ಅಜಯಕುಮಾರ್ ಅವರ ವಿರುದ್ಧ ತಹಶೀಲ್ದಾರ್ ಎನ್‌.ಬಿ. ಗಿರೀಶ್ ಸಲ್ಲಿಸಿರುವ ದೂರಿನ ಸಂಬಂಧ ಬಡಾವಣೆ ಪೊಲೀಸರು ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ವರದಿ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ನ್ಯಾಯಾಲಯ ಮುಂದಿನ ನಿರ್ದೇಶನ ಎದುರು ನೋಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿ ಕರ್ಫ್ಯೂ ಆದೇಶ ಹೊರಡಿಸಿದ್ದರೂ ಜನರನ್ನು ಗುಂಪುಗೂಡಿಸಿಕೊಂಡು ಜನ್ಮದಿನ ಆಚರಿಸುವ ಮೂಲಕ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಮೇಯರ್‌ ಉಲ್ಲಂಘಿಸಿದ್ದರು. ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದನ್ನು ವೀಕ್ಷಿಸಿ ಕ್ರಮ ಕೈಗೊಳ್ಳಬೇಕು’ ಎಂದು ತಹಶೀಲ್ದಾರ್ ಬಡಾವಣೆ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.