ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಲೇರಿಯ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಮುಖ್ಯ’

Published 19 ಜೂನ್ 2024, 14:41 IST
Last Updated 19 ಜೂನ್ 2024, 14:41 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ‘ಮಲೇರಿಯ ನಿಯಂತ್ರಿಸಲು ಮನೆಯ ಸುತ್ತುಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆಗ ಮಲೇರಿಯಾ ನಿಯಂತ್ರಣ ಸಾಧ್ಯ. ಇದಕ್ಕೆ ಸಮುದಾಯದ ಸಹಕಾರ ಮುಖ್ಯ. ಗಪ್ಪಿ ಹಾಗೂ ಗ್ಯಾಂಬೂಸಿಯಾ ಮೀನುಗಳನ್ನು ಬಿಡುವ ಮೂಲಕವಾಗಿ ಲಾರ್ವ ನಾಶ ಮಾಡಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ತಿಳಿಸಿದರು.

ಸಮೀಪದ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಲೇರಿಯ ವಿರೋಧಿ ಮಾಸಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಲೇರಿಯ ರೋಗಿಯಲ್ಲಿ ಚಳಿ ಜ್ವರ, ಅಸ್ವಸ್ಥತೆ, ತಲೆನೋವು, ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು, ಕೆಮ್ಮು ಇಂತಹ ಲಕ್ಷಣಗಳು ಕಂಡು ಬರುತ್ತವೆ. ಯಾವುದೇ ಜ್ವರ ಬರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಹಿಂದೆ ಗ್ರಾಮಗಳಲ್ಲಿ ಮಲೇರಿಯ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದವು. ಆರೋಗ್ಯ ಇಲಾಖೆಯ ಪರಿಶ್ರಮದಿಂದ ಗ್ರಾಮಗಳು ಮಲೇರಿಯ ಮುಕ್ತವಾಗಿದೆ. ಮಲೇರಿಯಾ ಜ್ವರ ಬಂದ ವ್ಯಕ್ತಿಯನ್ನು ಕಚ್ಚಿದ ಅನಾಫಿಲೀಸ್ ಸೊಳ್ಳೆ ಬೇರೆ ವ್ಯಕ್ತಿಗಳನ್ನು ಕಚ್ಚಿದರೆ ಅವರೂ ಸಹ ಮಲೇರಿಯಾಕ್ಕೆ ತುತ್ತಾಗುತ್ತಾರೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಎಂ. ಉಮ್ಮಣ್ಣ ತಿಳಿಸಿದರು.

ತಾಲ್ಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಮುಖ್ಯೋಪಾಧ್ಯಾಯ ವಿ.ನಾಗೇಂದ್ರಪ್ಪ, ತಾಲ್ಲೂಕು ಹಿರಿಯ ಸುರಕ್ಷಾಧಿಕಾರಿ ಸುಧಾ, ಪ್ರಭಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವಿಕುಮಾರ್ ಮಾತನಾಡಿದರು.  ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರೀತಿ, ಆಶಾ ಕಾರ್ಯಕರ್ತೆಯರು, ಪ್ರೌಢಶಾಲಾ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT