ಮಾಯಕೊಂಡದಲ್ಲಿ ನಡುರಸ್ತೆಯನ್ನೇ ಬಸ್ ತಂಗುದಾಣ ಮಾಡಿಕೊಂಡಿರುವುದು
ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ ಅವರ ಅವಧಿಯಲ್ಲಿ ಕೆಎಸ್ಆರ್‌ಟಿಸಿ ನಿಲ್ದಾಣಕ್ಕೆ ನಿವೇಶನ ಹಸ್ತಾಂತರ ಮಾಡಲಾಗಿತ್ತು. ನೀಲನಕ್ಷೆಯೂ ಸಿದ್ಧವಾಗಿತ್ತು. ಆದರೆ ಕಾಮಗಾರಿ ಮಾತ್ರ ನಡೆಯಲಿಲ್ಲ.
ಎಂ.ಜಿ. ಗುರುನಾಥ ಗ್ರಾಮದ ಮುಖಂಡ
ಶಾಸಕರು ಶೀಘ್ರವೇ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು
ನಾಗರಾಜ ಉಪ್ಪಾರ್ ಗ್ರಾಮದ ಯುವಕ
ಹೈಟೆಕ್ ಬಸ್ ನಿಲ್ದಾಣ ಶೀಘ್ರ
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 3.75 ಕೋಟಿ ಅನುದಾನ ನೀಡಲಾಗುತ್ತಿದೆ. ಉಳಿದ ಅನುದಾನವನ್ನು ನಿಗಮದಿಂದ ಮಂಜೂರು ಮಾಡಿಸಿ ಗ್ರಾಮದಲ್ಲಿ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಶೀಘ್ರವೇ ನಿರ್ಮಿಸಲಾಗುವುದು. ಕೆ.ಎಸ್.ಬಸವಂತಪ್ಪ ಮಾಯಕೊಂಡ ಶಾಸಕ