ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿವಾಸಿಗಳಿಗೆ ಶಾಸಕ ಮನವಿ

7
ಅಪಾಯದ ಮಟ್ಟ ತಲುಪಿದ ತುಂಗಭದ್ರಾ ನದಿ

ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿವಾಸಿಗಳಿಗೆ ಶಾಸಕ ಮನವಿ

Published:
Updated:
Deccan Herald

ಹೊನ್ನಾಳಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ತುಂಗಾ ಹಾಗೂ ಭದ್ರಾ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿರುವುದರಿಂದ ಇಲ್ಲಿನ ನದಿ ನೀರಿನ ಮಟ್ಟ 11.400 ಮೀಟರ್ ಗೆ ಏರಿಕೆಯಾಗಿದ್ದು, ಅಪಾಯದ ಮಟ್ಟ ತಲುಪಿದೆ.
ಇದರಿಂದಾಗಿ ಪಟ್ಟಣದ ಬಾಲರಾಜ್ ಘಾಟ್ ನಲ್ಲಿ ವಾಸಿಸುತ್ತಿದ್ದ 17 ಕುಟುಂಬಗಳ 91 ಜನ ನೆರೆ ಸಂತ್ರಸ್ತರನ್ನು ಸಮೀಪದ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿ ಅಲ್ಲಿ ಗಂಜಿಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಎಂ.ಪಿ. ರೇಣುಕಾಚಾರ್ಯ ಭೇಟಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಾಲರಾಜ್‌ಘಾಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು.

ನಂತರ ಗಂಜಿಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಆಲಿಸಿದ ಸಂದರ್ಭ ನದಿ ತೀರದಲ್ಲಿ ವಾಸ ಮಾಡದಂತೆಯೂ ಮನವಿ ಮಾಡಿದರು.

ತಹಶೀಲ್ದಾರ್ ಡಾ. ನಾಗವೇಣಿಯವರೊಂದಿಗೆ ಮಾತನಾಡಿ, ‘ನೆರೆ ಹಾನಿಯಿಂದ ಉಂಟಾದ ನಷ್ಟದ ವರದಿಯನ್ನು ತಕ್ಷಣವೇ ನೀಡುವಂತೆ’ ಸೂಚಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಕಂದಾಯಾಧಿಕಾರಿ ವಸಂತ್, ನಾಗೇಶ್, ಗ್ರಾಮ ಲೆಕ್ಕಿಗರಾದ ಮುಬಾರಕ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ, ರಾಜಸ್ವ ನಿರೀಕ್ಷಕ ಮಂಜುನಾಥ್ ಇಂಗಳಗೊಂದಿ, ಜಯರಾಂ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !