ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಭ್ಯಾಸಕ್ಕೆ ಮಗಳ ನಿರಾಸಕ್ತಿ: ತಾಯಿ ಆತ್ಮಹತ್ಯೆ

Published 22 ಜುಲೈ 2023, 15:37 IST
Last Updated 22 ಜುಲೈ 2023, 15:37 IST
ಅಕ್ಷರ ಗಾತ್ರ

ನ್ಯಾಮತಿ: ವಿದ್ಯಾಭ್ಯಾಸದತ್ತ ಮಗಳು ಸರಿಯಾಗಿ ಗಮನ ಕೊಡುತ್ತಿಲ್ಲ ಎಂದು ಮನನೊಂದ ತಾಯಿ ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ನೆಹರೂ ರಸ್ತೆ ನಿವಾಸಿ ಸತೀಶ ಅವರ ಪತ್ನಿ ಭಾವನಾ (35) ಆತ್ಮಹತ್ಯೆ ಮಾಡಿಕೊಂಡವರು.

ಭಾವನಾ ಅವರ ಮಗಳು ಶಿವಮೊಗ್ಗದ ಅಕ್ಷರ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು, ಮಗಳ ವಿದ್ಯಾಭ್ಯಾಸದ ಪ್ರಗತಿ ಕುರಿತು ಶಿಕ್ಷಕೆನ್ನು ವಿಚಾರಿಸಿದಾಗ ಶಿಕ್ಷಕರು, ಸಾಧಾರಣವಾಗಿ ಓದುತ್ತಿದ್ದಾಳೆ ಎಂದು ತಿಳಿಸಿದ್ದರು. ಇದರಿಂದ ಬೇಸರಗೊಂಡಿದ್ದ ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ತಂದೆ, ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಆನವೇರಿ ಗ್ರಾಮದ ನಿವಾಸಿ ಬಸವರಾಜಪ್ಪ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ನ್ಯಾಮತಿ ಪಿಎಸ್‌ಐ ಪಿ.ಎಸ್.ರಮೇಶ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT