ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್ ವಿತರಣೆಯಲ್ಲಿ ಅಕ್ರಮ: ಪ್ರತಿಭಟನೆ

Last Updated 13 ಜುಲೈ 2021, 3:36 IST
ಅಕ್ಷರ ಗಾತ್ರ

ಹರಪನಹಳ್ಳಿ: ಪಟ್ಟಣದ ರಾಜೀವ್‌ ಗಾಂಧಿ ಸಮುದಾಯ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯು ವಿತರಿಸಿದ ಆಹಾರದ ಕಿಟ್ ಪಡೆಯಲು ಜನರುಸೋಮವಾರ ಮುಗಿ ಬಿದ್ದಿದ್ದರು.

ತಾಲ್ಲೂಕಿನಲ್ಲಿ ನೋಂದಾಯಿತ 18 ಸಾವಿರ ಕಾರ್ಮಿಕರಿದ್ದಾರೆ. 5 ಕೆ.ಜಿ. ಅಕ್ಕಿ, ಬೇಳೆ, ಅವಲಕ್ಕಿ, ಎಣ್ಣೆ, ಕಾರದಪುಡಿ ಒಳಗೊಂಡಿರುವ ಕಿಟ್‌ಗಳನ್ನು ತಾಲ್ಲೂಕಿಗೆ 1200 ಕಳುಹಿಸಲಾಗಿದೆ ಎಂದು ಕಾರ್ಮಿಕ ನಿರೀಕ್ಷಕ ನಾಗೇಶ್ ತಿಳಿಸಿದರು.

ಅವ್ಯವಹಾರ ಆರೋಪ ಖಂಡಿಸಿ ಪ್ರತಿಭಟನೆ: ಪುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಮತ್ತು ರಾಜ್ಯ ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್, ರಾಜ್ಯ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿ ಕಾರ್ಮಿಕ ನಿರೀಕ್ಷಕ ನಾಗೇಶ್ ಅವರ ಮುಖಾಂತರ ಕಾರ್ಮಿಕ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಿದರು.

ಎಐಟಿಯುಸಿ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಇದ್ಲಿ ರಾಮಪ್ಪ, ರಮಹತ್ ಕುಂಚೂರು, ಶಬ್ಬೀರ್‌, ಬಳಿಗನೂರು ಕೊಟ್ರೇಶ್, ಕೆ.ಟಿ. ರಾಜಪ್ಪ, ದಾದಾಪೀರ್, ನಟರಾಜ್ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರ ವಿತರಿಸಿದ ಕಿಟ್‌ಗಳನ್ನು ಹಾಗೆಯೇ ಇರಿಸಿದರೆ ಕೆಟ್ಟು ಹೋಗುತ್ತವೆ. ನೋಂದಾಯಿತ ಕಾರ್ಮಿಕರಿಗೆ ಹಂತ ಹಂತವಾಗಿ ಟೋಕನ್ ವಿತರಿಸಲಾಗುವುದು. ಕೋವಿಡ್ ಇರುವ ಕಾರಣ ಅಂತರ ಕಾಯ್ದುಕೊಂಡು ಪಡೆಯಬೇಕು ಎಂದು ಕಾರ್ಮಿಕ ನಿರೀಕ್ಷಕ ನಾಗೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT