ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ಪೀಟ್ ಜೂಜಾಟ 8 ಜನರ ಬಂಧನ

Published 2 ಆಗಸ್ಟ್ 2024, 15:30 IST
Last Updated 2 ಆಗಸ್ಟ್ 2024, 15:30 IST
ಅಕ್ಷರ ಗಾತ್ರ

ಫಲವನಹಳ್ಳಿ(ನ್ಯಾಮತಿ): ಗ್ರಾಮದ ಸೇವಾಲಾಲ್ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಗುರುವಾರ ಪೊಲೀಸರು ಬಂಧಿಸಿ ಪ್ರಕರಣದ ದಾಖಲಿಸಿದ್ದಾರೆ.

ಗ್ರಾಮದ ಗಿರೀಶನಾಯ್ಕ, ಮಹೇಶ, ಉಮೇಶನಾಯ್ಕ, ಗಿರೀಶನಾಯ್ಕ, ಗಜೇಂದ್ರನಾಯ್ಕ, ಮಧುನಾಯ್ಕ, ಕಾಂತರಾಜ ಮತ್ತು ಕುಬೇರನಾಯ್ಕ ಅವರನ್ನು ಬಂಧಿಸಿ ಅವರು ಆಟಕ್ಕೆ ತೊಡಗಿಸಿದ್ದ ₹10,860 ನಗದು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಸಬ್‌ಇನ್‌ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ ಮತ್ತು ಹೆಡ್ ಕಾನ್‌ಸ್ಟೆಬಲ್ ಕೆ.ಮಂಜಪ್ಪ ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆ ಬೀಗ ಮುರಿದು ಕಳವು

ಗಂಜೀನಹಳ್ಳಿ (ನ್ಯಾಮತಿ): ಗ್ರಾಮದಲ್ಲಿ ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಗುರುವಾರ ನಡೆದಿದೆ.

ಗ್ರಾಮದ ಪರಸಪ್ಪ ಅವರು ತಾವು ಬಾಡಿಗೆ ಇದ್ದ ಮನೆಗೆ ರಾತ್ರಿ ಬೀಗ ಹಾಕಿ ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಮಲಗಲು ಕುಟುಂಬ ಸಮೇತ ಹೋಗಿದ್ದರು. ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ₹40,000 ನಗದು ಹಾಗೂ ವಿವಿಧ ಬಂಗಾರದ ಒಡವೆಗಳು ಸೇರಿ ಒಟ್ಟು ಅಂದಾಜು ₹1.45 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT