ಹರಿಹರ (ದಾವಣಗೆರೆ): ‘ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ನಡುವೆ ಭೇದ–ಭಾವ ಮೂಡಿಸುವ ಪ್ರಯತ್ನ ನಡೆದರೂ ಮಠಾಧೀಶರು ಒಂದಾಗುವ ಒಲವು ತೋರಿದ ನಿರ್ಧಾರ ಪ್ರಸಂಶನೀಯ. ಸಮುದಾಯದ ಜನರ ಹೃದಯಗಳು ಕೂಡ ಒಗ್ಗೂಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಹರ ಜಾತ್ರೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹರಿಹರ ಪೀಠ ನಿರ್ಮಾಣಕ್ಕೆ ಹಲವು ಜಿಜ್ಞಾಸೆಗಳಿದ್ದವು. ಒಂದೇ ಪೀಠ ಇರಬೇಕು ಎಂಬ ತೀರ್ಮಾನವಾಗಿತ್ತು. ಆದರೆ, ಕೆಲವರು ಕೈಗೊಂಡ ನಿರ್ಧಾರದಿಂದ ಎರಡು ಪೀಠಗಳು ನಿರ್ಮಾಣವಾದವು. ಇವುಗಳ ನಡುವೆ ಒಗ್ಗಟ್ಟು ಮೂಡಿದರೆ ಸಮುದಾಯದ ಶಕ್ತಿ ಇಮ್ಮಡಿಗೊಳ್ಳಲಿದೆ’ ಎಂದರು.

‘ಕಾಯಕನಿಷ್ಠೆ ಹೊಂದಿರುವ ಸಮುದಾಯವನ್ನು ಶ್ರಮದಿಂದ ಕಟ್ಟಬೇಕಿದೆ. ಭೂಮಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದವರು ತಾಳ್ಮೆ, ಪ್ರಾಮಾಣಿಕತೆ, ಶ್ರಮದ ಪ್ರತಿರೂಪದಂತೆ ಇದ್ದಾರೆ. ಇತ್ತೀಚೆಗೆ ಭೂಮಿ ಮೇಲಿನ ಅವಲಂಬನೆ ಹೆಚ್ಚಾಗಿದೆ. ಹೀಗಾಗಿ, ಶಿಕ್ಷಣಕ್ಕೆ ಹೆಚ್ಚು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಬೇಕು. ಬಡವರು ಶಿಕ್ಷಣ ಪಡೆಯಲು ನೆರವಾಗಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ 25 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ₹ 49,000 ಕೋಟಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ ಸೇರಿ ಹಲವು ಯೋಜನೆಗಳು ಸಾಕಾರಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ ದೇಶ ಸಂಪದ್ಭರಿತವಾಗಲಿದೆ. ವಿಶ್ವದ ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ ಮೊದಲ ಸ್ಥಾನಕ್ಕೆ ಏರಲಿದೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಹಿಂದೂವೇ ನಮ್ಮ ಧರ್ಮ:

‘ವೀರಶೈವ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಸ್ಥಾನ ಸಿಗುವವರೆಗೂ ಹಿಂದೂವೇ ನಮ್ಮ ಧರ್ಮ. ಜಾತಿ ಗಣತಿ ಸಂದರ್ಭದಲ್ಲಿ ಸ್ಪಷ್ಟ ನಿಲುವು ತಳೆದು ಸಮುದಾಯಕ್ಕೆ ಮಾರ್ಗದರ್ಶನ ನೀಡಲಾಗಿದೆ. ಈ ನಿಲುವಿಗೆ ಸದಾ ಬದ್ಧವಾಗಿರೋಣ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹೇಳಿದಾಗ ಭಕ್ತರು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು.

‘₹ 1.65 ಕೋಟಿ ಭಕ್ತರು ದಾಸೋಹಕ್ಕೆ ನೆರವು ನೀಡಿದ್ದಾರೆ. ಇದರಲ್ಲಿ ₹ 50 ಲಕ್ಷವನ್ನು ಬಸವರಾಜ ಬೊಮ್ಮಾಯಿ, ₹ 25 ಲಕ್ಷವನ್ನು ಎಸ್.ಎಸ್. ಮಲ್ಲಿಕಾರ್ಜುನ್ ಕೊಟ್ಟಿದ್ದಾರೆ. ಇದು ಒಬ್ಬ ವ್ಯಕ್ತಿಯಿಂದಲ್ಲ ಭಕ್ತರಿಂದ ನಡೆಯುತ್ತಿದೆ. ಮಠಕ್ಕೆ ನೀರು ಬರಲು ಕಾರಣರಾದವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ತರಳಬಾಳು ಮಠದ ರೀತಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ’ ಎಂದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಸಂಗನಬಸಪ್ಪ ಶಿವಾಚಾರ್ಯ ಸ್ವಾಮೀಜಿ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ರಾಜ್ಯಸಭಾ ಸದಸ್ಯ ವೀರಣ್ಣ ಕಡಾಡಿ, ಶಾಸಕರಾದ ಕೆ.ಎಸ್. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಯಾಸೀರ್ ಅಹಮ್ಮದ್ ಖಾನ್ ಪಠಾಣ, ಪ್ರಕಾಶ ಕೋಳಿವಾಡ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಎಂ.ಪಿ. ರೇಣುಕಾಚಾರ್ಯ, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ರೈತ ಮುಖಂಡ ತೇಜಸ್ವಿ ಪಟೇಲ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಹಾಜರಿದ್ದರು.

ಉಳುವ ಯೋಗಿಯ ಕುಟುಂಬಗಳ ಪಂಚಮಸಾಲಿಗಳು ನಿಸರ್ಗ ಆರಾಧಕರು. ಭೂಮಿಯನ್ನು ಅವಲಂಬಿಸಿದ ಸಮುದಾಯವಿದು. ಕಾಯಕದ ಮೇಲಿನ ಅನುಭಾವವೇ ಸಮುದಾಯದ ಅಧ್ಯಾತ್ಮ
ವೇದಾರಾಣಿ ದಾಸನೂರು ಕಿತ್ತೂರು ರಾಣಿ ಪ್ರಶಸ್ತಿ ಪುರಸ್ಕೃತೆ

ಕೃಷಿ ಮೂಲಕ ಬದುಕು ಕಟ್ಟಿಕೊಂಡ ಪಂಚಮಸಾಲಿ ಸಮುದಾಯ ಸ್ವಾಭಿಮಾನ ಸಂಸ್ಕಾರಕ್ಕೆ
ಹೆಸರುವಾಸಿ. ವೀರಶೈವ–ಲಿಂಗಾಯತರು ರಾಜ್ಯ ರಾಜಕಾರಣದಲ್ಲಿ ಎಂದಿಗೂ ಕೆಟ್ಟದ್ದು
ಬಯಸಿಲ್ಲ
ವಿ.ಸೋಮಣ್ಣ ಕೇಂದ್ರ ಸಚಿವ

2026ಕ್ಕೆ ನೂತನ ರಥ ಸಿದ್ಧ

2026ರ ಮಕರ ಸಂಕ್ರಾಂತಿಗೆ ಹರ ಜಾತ್ರೆಯ ಅಂಗವಾಗಿ ರಥೋತ್ಸವ ನಡೆಯಲಿದೆ. ನೂತನ ರಥ ಸಿದ್ಧವಾಗುತ್ತಿದ್ದು ರಥಕ್ಕೆ ಉತ್ತುತ್ತಿ ಎಸೆಯಲು ಎಲ್ಲರೂ ಬರಬೇಕು ಎಂದು ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ ಹೇಳಿದರು. ‘ಜಾತ್ರಾ ಮಹೋತ್ಸವಕ್ಕೆ 1 ಲಕ್ಷ ರೊಟ್ಟಿ 200 ಕ್ವಿಂಟಲ್ ಅಕ್ಕಿ 20 ಕ್ವಿಂಟಲ್ ಬೆಲ್ಲ 10000 ಮಿರ್ಚಿ ಮತ್ತು ಬೆಣ್ಣೆದೋಸೆ ಮೆಣಸಿನ ಕಾಯಿ ದೇಣಿಗೆ ರೂಪದಲ್ಲಿ ಮಠಕ್ಕೆ ಬಂದಿವೆ. 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಠದಲ್ಲಿ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಯಾವುದೇ ವ್ಯಕ್ತಿಗೆ ಸಂಘ ಅಥವಾ ಪೀಠ ಬಲಿಯಾಗಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.