ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಮಠಗಳಿಗೆ ಪ್ರಭಾ ಮಲ್ಲಿಕಾರ್ಜುನ್ ಭೇಟಿ

Published 28 ಮಾರ್ಚ್ 2024, 5:09 IST
Last Updated 28 ಮಾರ್ಚ್ 2024, 5:09 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಚಿತ್ರದುರ್ಗದ ಭೋವಿ ಗುರುಪೀಠ ಹಾಗೂ ಮಡಿವಾಳ ಗುರುಪೀಠಗಳಿಗೆ ಬುಧವಾರ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಭೋವಿ ಸಮುದಾಯದ ಅಧ್ಯಕ್ಷ ಎಚ್. ಜಯಣ್ಣ, ಮುಖಂಡರಾದ ಡಿ.ಕೆ.ತಿಮ್ಮಣ್ಣ, ಡಿ.ವಿ. ಮಲ್ಲಿಕಾರ್ಜುನ್, ಟಿ. ಶ್ರೀನಿವಾಸ್, ಜಿ.ಸಿ. ಮಂಜಪ್ಪ, ಪ್ರವೀಣ್, ಅರ್ಜುನ್, ವಿನಾಯಕ, ಪರಶುರಾಮ್, ರಾಘವೇಂದ್ರ, ರಾಜು ಎಂ, ಈಶಣ್ಣ, ವೀರೇಶ್, ಪರಮೇಶ್, ದೇವರಾಜ್, ಎಸ್. ರವಿಕುಮಾರ್, ಶಿವಮೂರ್ತಿ, ರಾಮಚಂದ್ರಪ್ಪ, ನಾಗರಾಜಪ್ಪ, ವೀರಭದ್ರಪ್ಪ, ಕುಮಾರ್ ಭೋವಿ, ಭೀಮಪ್ಪ. ಕರಿಯಪ್ಪ ಇದ್ದರು.

ಬಳಿಕ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಮಾಜದ ಅಧ್ಯಕ್ಷ ರಾಮಜ್ಜ, ಮುಖಂಡರಾದ ಮಂಜುನಾಥ್, ಎಂ. ನಾಗೇಂದ್ರಪ್ಪ, ಮಹಾಲಿಂಗ ಸ್ವಾಮಿ, ಹೆಚ್‌.ಜಿ ಉಮೇಶ್ ರುದ್ರಪ್ಪ, ಸಿದ್ದೇಶ್, ಡ್ರೈವರ್ ಫಕೀರಪ್ಪ, ಅಣ್ಣಪ್ಪ ಕರಾಟೆ, ರಾಜ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಗರದ 20ಕ್ಕೂ ಹೆಚ್ಚು ಅಂಗವಿಕಲರು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ಕೋರಿದರು. ಸಂಸದರಾದ ನಂತರ ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಅವರಗೊಳ್ಳದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರಗೊಳ್ಳ ಹಾಗೂ ಕಕ್ಕರಗೊಳ್ಳ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT