ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕಾಗಿ ಎಸ್‌ಯುಸಿಐ ಪ್ರತಿಭಟನೆ

ಬಾಷಾ ನಗರ, ಶಾಂತಿನಗರದಲ್ಲಿ ಸಮಸ್ಯೆಗಳ ನಿವಾರಣೆಗೆ ಆಗ್ರಹ
Last Updated 27 ಮೇ 2022, 4:10 IST
ಅಕ್ಷರ ಗಾತ್ರ

ದಾವಣಗೆರೆ: ಬಾಷಾ ನಗರದ 17ನೇ ಅಡ್ಡರಸ್ತೆಯಲ್ಲಿ ಚರಂಡಿ, ರಸ್ತೆ, ಬೀದಿ ದೀಪ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸಬೇಕು. ಶಾಂತಿನಗರದಲ್ಲಿ ಅವ್ಯವಸ್ಥೆ ಸರಿಪಡಿಸಬೇಕು ಆಗ್ರಹಿಸಿ ಸೋಷಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ-ಕಮ್ಯೂನಿಸ್ಟ್ (ಎಸ್‍ಯುಸಿಐ-ಸಿ) ವತಿಯಿಂದ ನಗರದ ಅಕ್ತರ್‌ ರಜಾ ಸರ್ಕಲ್‌ ಮತ್ತು ಶಾಂತಿನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇತ್ತೀಚೆಗೆ ನಗರದಲ್ಲಾದ ವಿಪರೀತ ಮಳೆ ಪರಿಣಾಮದಿಂದಾಗಿ ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸಮಸ್ಯೆಗಳು ಜನಸಾಮಾನ್ಯರ ಜೀವನವನ್ನು ಹೈರಣಾಗಿಸಿವೆ. ಮಳೆಯಿಂದಾಗಿ ಚರಂಡಿ ನೀರು ಮನೆಯೊಳಗೆ ನುಗ್ಗಿದೆ. ಮನೆಗಳು, ಕಟ್ಟಡ ಸಡಿಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಮಳೆ ಪ್ರಾರಂಭವಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆ ಅಥವಾ ಮಹಾನಗರ ಪಾಲಿಕೆಯಿಂದ ಈ ಕೂಡಲೇ ಚರಂಡಿಯ ಅವ್ಯವಸ್ಥೆಯನ್ನು ಸರಿಪಡಿಸಿ, ಮಳೆಯ ನೀರು ಮನೆಯ ಒಳಗೆ ನುಗ್ಗದಂತೆ ಕಾಮಗಾರಿಯನ್ನು ನಡೆಸಬೇಕು. ಕೊಳವೆಬಾವಿ ದುರಸ್ತಿ‍ಪಡಿಸಿ, ನೀರಿನ ವ್ಯವಸ್ಥೆ ಸರಿಪಡಿಸಬೇಕು. ಹಂದಿಗಳ ಉಪಟಳ ತಪ್ಪಿಸಬೇಕು. ಬೀದಿದೀಪಗಳನ್ನು ಸರಿಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ತಿಪ್ಪೇಸ್ವಾಮಿ ಅಣಬೇರು, ಭಾರತಿ, ನಾಗಸ್ಮಿತ, ಪುಷ್ಪಾ, ಮನೋಜ್, ಅಭಿಷೇಕ್, ನಾಗರಿಕರಾದ ಬೀಬಿ ಆಯಿಶಾ, ಗುಲ್ಜಾರ್‌ಬೀ, ಜೋಗಮ್ಮ, ದಿಲ್ಷಾದ್ ಬೀ, ಮೆಹಬೂಬ್ ಸಾಬ್, ಜಾಕೀರ್ ಸಾಬ್
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT