ಬಸವಾಪಟ್ಟಣ: ಭಾನುವಾರ ಮುಂಜಾನೆಯಿಂದ ಸುರಿದ ಮಳೆಗೆ ಇಲ್ಲಿನ ಗೋತೆ ಹಳ್ಳಕ್ಕೆ ನಿರ್ಮಿಸಿರುವ ಚೆಕ್‌ಡ್ಯಾಂ ಭರ್ತಿಯಾಗಿದೆ.

ಹೆಚ್ಚುವರಿ ನೀರು ಹಳ್ಳದ ಮೂಲಕ ಇಲ್ಲಿನ ಸಿಹಿ ನೀರು ಕೆರೆ ಸೇರುತ್ತಿದೆ. ಚೆಕ್‌ಡ್ಯಾಂನಲ್ಲಿ 0.5 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದ ಸುತ್ತಲಿನ 25 ಕಿ.ಮೀ. ವ್ಯಾಪ್ತಿಯ ತೋಟ ಹೊಲಗದ್ದೆಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದು ರೈತರು ಹೇಳಿದರು.

ಇಲ್ಲಿನ ಸಿಹಿನೀರು ಕೆರೆಯೂ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ತೋಟಗದ್ದೆಗಳಿಗೆ ಸಾಕಷ್ಟು ನೀರು ದೊರೆಯಲಿದ್ದು, ರೈತರು ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯುವ ಆಶಾವಾದ ಹೆಚ್ಚಿದೆ. ಈ ವರ್ಷದ ಮಳೆಗೆ ಸುತ್ತಲಿನ ಗ್ರಾಮಗಳ ಬಹುತೇಕ ಎಲ್ಲಾ ಕೆರೆಗಳೂ ತುಂಬಿವೆ. ದಾಗಿನಕಟ್ಟೆಯ ಇತಿಹಾಸ ಪ್ರಸಿದ್ಧ ನಾಗತಿಕೆರೆಯೂ ಭರ್ತಿಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.