ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಇಳಿಮುಖ; ಏರಿದ ಪ್ರವಾಹ

Last Updated 25 ಜುಲೈ 2021, 4:10 IST
ಅಕ್ಷರ ಗಾತ್ರ

ದಾವಣಗೆರೆ:ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಆದರೆ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಬೆಳೆಗಳು ಹಾನಿಯಾಗಿವೆ.

ಮಳೆಯಿಂದಾಗಿ ದಾವಣಗೆರೆ ತಾಲ್ಲೂಕಿನಶ್ಯಾಗಲೆಹಳ್ಳದ ಸಂಕ್ಲಿಪುರ ಹಾಗೂ ಗುಡದಳ್ಳಿ ಸೇತುವೆ ಮುಳುಗಡೆಯಾಗಿದ್ದು,ಐದಕ್ಕೂ ಹೆಚ್ಚು ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮುಳುಗಡೆಯಿಂದಾಗಿ ಹಲವು ಕಡೆ ಸುತ್ತು ಹಾಯ್ದು ಜನರು ದಾವಣಗೆರೆಗೆ ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ 10.64 ಮಿ.ಮೀ ಸರಾಸರಿ ಮಳೆಯಾಗಿದ್ದು, ₹ 42.52 ಲಕ್ಷ ಹಾನಿಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 12 ಕಚ್ಚಾ ಮನೆಗಳು, ಹರಿಹರ ತಾಲ್ಲೂಕಿನಲ್ಲಿ 6 ಪಕ್ಕಾ ಮನೆ, 17 ಕಚ್ಚಾ ಮನೆ, ಎರಡು ದನದ ಕೊಟ್ಟಿಗೆಗಳು ಹಾನಿಯಾಗಿವೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 26 ಪಕ್ಕಾ ಮನೆ, ನ್ಯಾಮತಿಯಲ್ಲಿ 30 ಪಕ್ಕಾ ಮನೆ, 3 ದನದ ಕೊಟ್ಟಿಗೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 16 ಪಕ್ಕಾ ಮನೆಗಳಿಗೆ ಹಾನಿಯಾಗಿದೆ.

ಸರಾಸರಿ ಮಳೆ ವಿವರ
ತಾಲ್ಲೂಕು–ಮಳೆಯ ಪ್ರಮಾಣ (ಮಿ.ಮೀಗಳಲ್ಲಿ); ನಷ್ಟ (₹ಲಕ್ಷಗಳಲ್ಲಿ)
ಚನ್ನಗಿರಿ
: 13.7; 0.62
ದಾವಣಗೆರೆ: 5; 6.10
ಹರಿಹರ: 8.10; 16.10
ಹೊನ್ನಾಳಿ: 26; 13
ಜಗಳೂರು: 0.40; 5.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT