ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಿ ಪುನರ್‌ನಿರ್ಮಿಸಲು ಆಗ್ರಹ

Last Updated 5 ಜುಲೈ 2021, 4:18 IST
ಅಕ್ಷರ ಗಾತ್ರ

ದಾವಣಗೆರೆ: ಗಾಂಧಿನಗರದ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಸಮಾಧಿಗಳನ್ನು ಏಕಾಏಕಿ ನೆಲಸಮ ಮಾಡಲಾಗಿದೆ. ಅದನ್ನು ಪುನರ್‌ನಿರ್ಮಿಸಿ ಕೊಡಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಒತ್ತಾಯಿಸಿದರು.

ವರ್ಷಕ್ಕೊಮ್ಮೆ ಸಮಾಧಿಗೆ ಹೋಗಿ ಹಿರಿಯರಿಗೆ ಗೌರವ ಸಲ್ಲಿಸುವುದು ಹಿಂದೂಗಳ ಪದ್ಧತಿ. ಆದರೆ ವಾರದ ಹಿಂದೆ ಇದ್ದಕ್ಕಿದ್ದಂತೆ 10–12 ಸಮಾಧಿಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಈ ಬಗ್ಗೆ ಪಾಲಿಕೆಯ ಮೇಯರ್‌, ಆಯುಕ್ತರಿಗೆ ಕೇಳಿದರೆ ಮಾಹಿತಿ ಇಲ್ಲ. ಧೂಡಾದಿಂದ ಇದಾಗಿದ್ದು ಎಂದು ಹೇಳಿದ್ದಾರೆ. ಪಾಲಿಕೆಯ ಆಸ್ತಿಯಲ್ಲಿ ಧೂಡಾ ಯಾಕೆ ಕೆಲಸ ಮಾಡಿದೆ ಗೊತ್ತಾಗಿಲ್ಲ. ಧೂಡಾ ಆಯುಕ್ತರನ್ನು ಕೇಳಿದರೆ ಶವಸಂಸ್ಕಾರ ಮಾಡುವಲ್ಲಿ ನೀರು ನಿಲ್ಲುತ್ತಿತ್ತು. ಅದಕ್ಕಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಸ್ತೆ ಮಾಡಲಿ. ಆದರೆ ಸಮಾಧಿಯನ್ನು ತೆರವು ಮಾಡಿರುವುದು ಸರಿಯಲ್ಲ. ರಸ್ತೆ ನಿರ್ಮಾಣ ಮಾಡುವಾಗ ಆ ಸಮಾಧಿಗಳನ್ನು ಕೂಡ ನಿರ್ಮಿಸಿ ಕೊಡಬೇಕು. ಇಲ್ಲದೇ ಇದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಚಂದ್ರಪ್ಪ ಜೋಗಿ, ತುಕಾರಾಂ, ಸುರೇಶ್, ಬಿ.ಎಚ್. ಉದಯಕುಮಾರ್, ವಿನಾಯಕ ಪೈಲ್ವಾನ್, ಮಲ್ಲಿಕಾರ್ಜುನ ಇಂಗಳೇಶ್ವರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT