ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರಸ್ತೆ ಕಾಮಗಾರಿ ಪರಿಶೀಲನೆ

Last Updated 14 ಜೂನ್ 2020, 15:58 IST
ಅಕ್ಷರ ಗಾತ್ರ

ದಾವಣಗೆರೆ: ರಿಂಗ್ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 46 ಕೋಟಿ ವೆಚ್ಚದ 5.8 ಕಿ.ಮೀ. ಸಿಸಿ ರಸ್ತೆ ಕಾಮಗಾರಿಯನ್ನು ಪಾಲಿಕೆ ವಿರೋಧಪಕ್ಷ ಸದಸ್ಯರು ಪರಿಶೀಲನೆ ಮಾಡಿದರು. ಅವೈಜ್ಞಾನಿಕವಾಗಿ ನಡೆಯುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ್, ಮುಖ್ಯ ಎಂಜಿನಿಯರ್ ಸತೀಶ್, ಎಇಇ ರವಿ, ಗುರುಪಾದಯ್ಯ, ಸಿಎಂಸಿ ಎಂಜಿನಿಯರ್ ನಟರಾಜ್, ಗುತ್ತಿಗೆದಾರ ಉದಯ ಶಿವಕುಮಾರ್ ರವಾರನ್ನು ಸ್ಥಳಕ್ಕೆ ಕರೆಸಿದರು.

7.5 ಮೀಟರ್ ಸಿಸಿ ರಸ್ತೆ, 3.5 ಮೀಟರ್ ಫೇವರ್ಸ್ ಹಾಕುತ್ತಿದ್ದು, ಇದರ ಬದಲಾಗಿ 9 ಮೀಟರ್ ಸಿಸಿ ರಸ್ತೆ 2 ಮೀಟರ್ ಫೇವರ್ಸ್ ಹಾಕಬೇಕು. ಮುಂದಿನ ದಿನದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಲಿದೆ. ಲೋಡ್ ವಾಹನಗಳು ಸಂಚರಿಸುವುದರಿಂದ ಫೇವರ್ಸ್ ಕುಸಿಯುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷದ ನಾಯಕ ಎ. ನಾಗರಾಜ್ ತಿಳಿಸಿದರು.

ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್ ಗಡಿ ಗುಡಾಳ್ ಮಂಜುನಾಥ್ ಮುಖಂಡರಾದ ಹುಲ್ಮನಿ ಗಣೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT