ಮಂಗಳವಾರ, ಸೆಪ್ಟೆಂಬರ್ 28, 2021
24 °C
ಸಂಬಂಧಪಟ್ಟವರು ಗಮನಹರಿಸಲು ಮನವಿ

ಕುರುಚಲು ಕಾಡಿನಂತಾದ ಸಂತೇಬೆನ್ನೂರು ಕಾಲೇಜು ಆಟದ ಮೈದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ದಟ್ಟ ಪೊದೆ, ಗಿಡ, ಗಂಟಿಗಳು ಬೆಳೆದಿವೆ. ಆಟದ ಅಂಗಳಗಳು ಮುಚ್ಚಿ ಪಾಳು ಭೂಮಿಯಂತಾಗಿವೆ. ಪದವಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಮೈದಾನದಲ್ಲಿ ಕಾಲಿಡದಂತಾಗಿದೆ.

ಸರ್ಕಾರಿ ಪದವಿ ಕಾಲೇಜು ಜಾಗ ಸುಮಾರು ಏಳು ಎಕರೆಯಿದೆ. ಕೊರೊನಾ ಕಾರಣ ಕಾಲೇಜಿಗೆ ಸತತ ರಜೆ ಘೋಷಿಸಿದ್ದರಿಂದ ಮೈದಾನಗಳು ಬಳಕೆಯಿಂದ ದೂರ ಉಳಿದು ಕ್ರಮೇಣ ಗಿಡಗಂಟಿಗಳು ಬೆಳೆದು ನಿಂತಿವೆ. ನಿರ್ವಹಣೆ ಇಲ್ಲದೆ ಇಡೀ ಮೈದಾನ ಅನುಪಯುಕ್ತಗೊಂಡಿದೆ. ಕ್ರೀಡಾಸಕ್ತ ವಿದ್ಯಾರ್ಥಿಗಳ ಸಾಧನೆಗೆ ಹಿನ್ನಡೆ ಆಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಶಶಿ, ರಮೇಶ್.

ಸುಸಜ್ಜಿತ ಕೊಠಡಿಗಳು ನಿರ್ಮಾಣಗೊಂಡಿವೆ. ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಮೈದಾನದ ಮಧ್ಯ ಕಾಲುವೆಯಲ್ಲಿ ನೀರು ನಿಂತು ಕಲುಷಿತ ಗೊಂಡಿದೆ. ಅಲ್ಲಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದೆ. ಸದ್ಯದ ನೆಲ ಕ್ರೀಡಾ ಅಂಕಣಗಳಿಗೆ ಸದೃಢವಲ್ಲ. ಕೆಂಪು ಮಣ್ಣಿನ ಮೇಲ್ಪದರ ರಚಿಸಬೇಕು. ಕುರುಚಲು ಗಿಡಗಳನ್ನು ತೆಗೆಯಿಸಬೇಕು. ದೊಡ್ಡ ಪ್ರಮಾಣದ ಯೋಜನೆಯಿಂದ ಮಾತ್ರ ಮೈದಾನಕ್ಕೆ ಕಾಯಕಲ್ಪ ಸಾಧ್ಯ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕೈಗೊಳ್ಳಲಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.

‘ಈಗಾಗಲೇ ₹ 2 ಕೋಟಿ ವೆಚ್ಚದ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಡಿಜಿಟಲ್ ತಂತ್ರಜ್ಞಾನದ ಪಾಠೋಪಕರಣಗಳನ್ನು ಅಳವಡಿಸಲಾಗಿದೆ. ವಿವಿಧ ಮೂಲಗಳಿಂದ ಮೈದಾನ ಸ್ವಚ್ಛತೆಗೆ ಅನುದಾನ ತರಲು ಪ್ರಯತ್ನ ನಡೆದಿದೆ. ತಾಂತ್ರಿಕ ಸಮಸ್ಯೆಗಳಿಂದ ತಡವಾಗುತ್ತಿದೆ. ಶೀಘ್ರ ಕ್ರೀಡಾ ಚಟುವಟಿಕೆಗೆ ಪೂರಕ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ’ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹುಚ್ಚಂಗಿ ಪ್ರಸಾದ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು