ಸಾಸ್ವೆಹಳ್ಳಿ: ಗ್ರಾಮದ ತುಂಗಾಭದ್ರಾ ನದಿ ದಡದಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಬೈರನಹಳ್ಳಿಯ ಚೇತನ್ ಸ್ವಾಮಿ (31) ಮೃತರು.

ಬುಧವಾರ ಮಧ್ಯಾಹ್ನ ವಿನಯ ಕುಮಾರ್ ಎಂಬವರು ತಮ್ಮ ಅಡಿಕೆ ತೋಟಕ್ಕೆ ತೆರಳಿದ್ದಾಗ ದುರ್ವಾಸನೆ ಬಂದಿದೆ. ಹಳ್ಳದ ದಡದ ಬಳಿ ಪರಿಶೀಲಿಸಿದಾಗ ವ್ಯಕ್ತಿಯ ಮೃತದೇಹ ಭಾಗಶಃ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.

‘ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ, ಇಲ್ಲಿ ತಂದುಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ ಮೃತರ ತಂದೆ ಹಾಲೇಶಯ್ಯ ಮಠದ್ ಅವರು ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.