ಬುಧವಾರ, ನವೆಂಬರ್ 13, 2019
28 °C

ಕುರಿ ಕಳವಿಗೆ ಬಂದಾತನ ರುಂಡ ಕತ್ತರಿಸಿ ಕೊಂದ ಕುರಿಗಾಹಿ

Published:
Updated:

ಮಲೇಬೆನ್ನೂರು: ಸಮೀಪದ ಮೂಗಿನಗೊಂದಿ ಬಳಿ ತೋಟವೊಂದರಲ್ಲಿ ಕುರಿ ಕಳವು ಮಾಡಲು ಬಂದವನನ್ನು ಕುರಿಗಾಹಿ ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ.

ಮಲೇಬೆನ್ನೂರು ಪಟ್ಟಣದ ನಿವಾಸಿ ಮಕ್ರಿ ಚಮನ್ ಸಾಬ್ (45) ಕೊಲೆಯಾದವರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಕೊಗನೊಳ್ಳಿ ಗ್ರಾಮದ ನಿವಾಸಿ ಅರ್ಜುನಪ್ಪ ಕೊಲೆಗೈದ ವ್ಯಕ್ತಿ. ಅರ್ಜುನಪ್ಪ ಕುರಿಗಳನ್ನು ಮೇಯಿಸಲು ಮಲೇಬೆನ್ನೂರಿಗೆ ಪ್ರತಿ ವರ್ಷ ಬರುತ್ತಿದ್ದರು. ಈ ಬಾರಿ ಮೂಗಿನಗೊಂದಿ ಬಳಿಯ ತೋಟದಲ್ಲಿ ಕುರಿಗಳನ್ನು ಬಿಟ್ಟಿದ್ದರು.

ಶನಿವಾರ ರಾತ್ರಿ ಚಮನ್‌ಸಾಬ್‌ ಕುರಿ ಕಳವು ಮಾಡಲು ಯತ್ನಿಸುತ್ತಿರುವುದನ್ನು ಕಂಡ ಅರ್ಜುನಪ್ಪ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಚಮನ್‌ಸಾಬ್‌ ಜತೆ ಇದ್ದವರು ಓಡಿ ಹೋಗಿದ್ದಾರೆ. ಅರ್ಜುನಪ್ಪ ಬಳಿಕ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ.

ಚಮನ್‌ಸಾಬ್‌ ಈ ಹಿಂದೆ ಹಲವು ಬಾರಿ ಕುರಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಆಗ ಪಂಚಾಯಿತಿ ನಡೆಸಿ ಬಿಡುಗಡೆಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಮನ್‌ಸಾಬ್‌ನ ಪತ್ನಿ ರಜೀಯಾ ಬೇಗಂ ನೀಡಿದ ದೂರಿನಂತೆ ಮಲೇಬೆನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)