ಗುರುವಾರ , ಜುಲೈ 29, 2021
20 °C

ಮೊಂಬತ್ತಿ ಬೆಳಗಿ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಡಾಖ್ ಗಡಿಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತಿಯ ಯೋಧರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಾಂ ಅಂಡ್ ಕೊ ಸರ್ಕಲ್‌ನಲ್ಲಿ ಕ್ಯಾಂಡಲ್ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿ, ಚೀನಾ ಅಧ್ಯಕ್ಷರ ಪ್ರತಿಕೃತಿ ಸುಡಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ. ಶೆಟ್ಟಿ ‘ದೇಶದ ಭದ್ರತೆ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಚೀನಾಕ್ಕೆ ಸರಿಯಾದ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಸವಿತಾ ಹುಲ್ಮನಿ ಗಣೇಶ್ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅನಿತಾ ಬಾಯಿ ಮಾಲತೇಶ್, ತಾ.ಪಂ ಸದಸ್ಯ ಆಶಾ ಮುರಳಿ, ಸಾಮಾಜಿಕ ಜಾಲತಾಣದ ಕೆ. ಎಲ್. ಹರೀಶ್ ಬಸಾಪುರ, ಬಾತಿ ಶಿವಕುಮಾರ್, ದಾವಣಗೆರೆ ಉತ್ತರ ಎಸ್ಸಿ ಘಟಕದ ಅಧ್ಯಕ್ಷ ರಂಗನಾಥಸ್ವಾಮಿ, ಎನ್.ಎಸ್.ಯು.ಐನ ಮುಜಾಹಿದ್, ಮಹಿಳಾ ಕಾಂಗ್ರೆಸ್ ನ ಶುಭಮಂಗಳ, ಗೀತಾ ಪ್ರಶಾಂತ್, ಗೀತಾ ಚಂದ್ರಶೇಖರ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.