ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ಹೇಳಿಕೆಗೆ ಪ್ರತಿಕ್ರಿಯೆ
Last Updated 28 ಫೆಬ್ರುವರಿ 2020, 15:44 IST
ಅಕ್ಷರ ಗಾತ್ರ

ದಾವಣಗೆರೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹೇಳಿಕೆ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ವೀರ ಸಾವರ್ಕರ್‌, ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ, ಹಾಗೂ ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್‌ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದು, ಎಚ್‌.ಕೆ.ಪಾಟೀಲ್‌ ಸಹಿತ ಎಲ್ಲಾ ಮುಖಂಡರು ಬೇಷರತ್‌ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಗಲಭೆಗೆ ಸೋನಿಯಾಗಾಂಧಿ ಕಾರಣ

ದೆಹಲಿ ಗಲಭೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಪ್ರಚೋದನಾಕಾರಿ ಭಾಷಣವೇ ಕಾರಣ. ಸೋನಿಯಾಗಾಂಧಿ ಅವರು ರಸ್ತೆಗೆ ಇಳಿಯಿರಿ ಮನೆಯಿಂದ ಹೊರಬನ್ನಿ ಎಂಬ ಹೇಳಿಕೆಗಳಿಂದ ದೆಹಲಿಯಲ್ಲಿ ಗಲಭೆ ಸಂಭವಿಸಿದೆ. ಆಮ್ ಆದ್ಮಿ ಪಕ್ಷದ ಶಾಸಕರ ಮನೆಯಲ್ಲಿ ಪೆಟ್ರೋಲ್ ಬಾಂಬ್‌ ಹಾಗೂ ಆಸಿಡ್‌ ಬಾಟಲಿಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿ. ಆದರೆ ಬಿಜೆಪಿಯವರ ಮನೆಯಲ್ಲಿ ಏನು ಸಿಕ್ಕಿಲ್ಲ. ಹೀನಾಯವಾಗಿ ಸೋತ ಕಾಂಗ್ರೆಸ್ ಗಲಭೆಗೆ ಪ್ರೇರಣೆ ನೀಡುತ್ತಿದೆ’ ಎಂದು ಆರೋಪಿಸಿದರು.

ಗುಂಡು ಹೊಡೆಯಬೇಕು ಎಂಬುದು ದೇಶಭಕ್ತರ ಭಾಷಣ:

‘ದೇಶ ವಿರೋಧಿಗಳಿಗೆ ಗುಂಡು ಹೊಡೆಯಬೇಕು ಎನ್ನುವುದು ಪ್ರಚೋದನೆಯಲ್ಲ. ಬದಲಾಗಿ ದೇಶಭಕ್ತರ ಭಾಷಣ ಎಂದು ಸಮರ್ಥಿಸಿಕೊಂಡರು. ಸಿಎಎ ಬಗ್ಗೆ ಮುಸ್ಲಿಮರಲ್ಲಿ ತಪ್ಪು ಕಲ್ಪನೆ ಮೂಡಿಸಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಒಂದೇ ಮದುವೆ ಎರಡು ಮಕ್ಕಳಾಗಬೇಕು ಎನ್ನುವುದು ನಮ್ಮ ಕಾರ್ಯಸೂಚಿ. ಕಾಂಗ್ರೆಸ್‌ನವರು ಆಂತರಿಕ ಯುದ್ಧ ಮಾಡುವ ಕುತಂತ್ರ ಮಾಡುತ್ತಿದ್ದಾರೆ. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರು ದೇಶಭಕ್ತರೇ’ ಎಂದು ಪ್ರಶ್ನಿಸಿದರು.

‘ಮಂಗಳೂರಿನಲ್ಲಿ ಪೊಲೀಸರು ಪೊಲೀಸರು ಗಲಭೆ ನಿಯಂತ್ರಿಸದಿದ್ದರಿಂದ ಮಂಗಳೂರು ಎರಡನೇ ದೆಹಲಿಯಾಗಲಿಲ್ಲ. ತನ್ವೀರ್‌ಸೇಟ್‌ ಹಲ್ಲೆಯಾದಾಗ ಪೊಲೀಸರು ರಕ್ಷಣೆ ನೀಡಿದರು. ಸೈನಿಕರು, ಪೊಲೀಸರ ಬಗ್ಗೆ ಹಗುರವಾಗಿ ಪೊಲಿಸರ ನೈತಿಕ ಬಲ ಕುಸಿಯುವುವಂತೆ ಮಾಡುವುದು ಸರಿಯಲ್ಲ’ ಎಂದರು.

‘ಪ್ರಾದೇಶಿಕ ಅಸಮಾನತೆ ಸರಿಪಡಿಸಿ’

ಇಂದಿನ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆ ಹೆಚ್ಚಾಗಿದ್ದು, ಇಂದಿನ ಬಜೆಟ್‌ಗೆ ಮುನ್ನ ಇದನ್ನು ಸರಿಪಡಿಸಬೇಕು ಎಂದು ಯತ್ನಾಳ್ ಮುಖ್ಯಮಂತ್ರಿಗೆ ಆಗ್ರಹಿಸಿದರು.

ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಕಲಬುರ್ಗಿ, ರಾಯಚೂರು, ಉಡುಪಿ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಸಂಪುಟದಲ್ಲಿ ಅವರೇ 10 ಮಂದಿ ಇರಬೇಕು ಎಂದೇನಿಲ್ಲ. ಹಲವರು ತ್ಯಾಗ ಮಾಡಿ ಉಳಿದವರಿಗೆ ಸಚಿವ ಸ್ಥಾನ ನೀಡಬೇಕು. ದಾವಣಗೆರೆಗೆ ಹಾಗೂ ವಿಜಯಪುರದಲ್ಲಿ 3 ಶಾಸಕರಲ್ಲಿ ಯಾರಿಗಾದರೂ ಒಬ್ಬರಿಗೆ ಹಾಗೂ ದತ್ತಾತ್ರೇಯ ಪಾಟೀಲ್‌, ರಾಜೂಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು. ನಾನು ಆಕಾಂಕ್ಷಿಯಲ್ಲ. ಸಚಿವ ಸ್ಥಾನ ಬೇಡಲು ಹೋಗಿಲ್ಲ. ಏಕೆಂದರೆ ವಾಜಪೇಯಿ ಅವರ ಬಳಿಕೆಲಸ ಮಾಡಿದ್ದೇನೆ. ಎಲ್ಲಾ ಅರ್ಹತೆ ಇದ್ದರೂ ಸಿಎಂ ಯಶಸ್ವಿಯಾಗಿ ಕೆಲಸ ಮಾಡಲಿ ಎಂದು ತ್ಯಾಗ ಮಾಡಿದ್ದೇನೆ’ಎಂದರು..

ನಾನು ಉತ್ತರ ಕರ್ನಾಟಕದ ಹುಲಿ

ಎಚ್‌.ಕೆ. ಪಾಟೀಲ್‌ ಅವರ ತಂದೆ ‘ಗದಗದ ಹುಲಿ’ ಇರಬಹುದು. ಆದರೆ ನಾನು ಉತ್ತರ ಕರ್ನಾಟಕದ ಹುಲಿ, ಎಚ್‌ಕೆ ಪಾಟೀಲ್‌ ಏನೆ ಇದ್ದರೂ ಗದಗದಲ್ಲಿ ತೋರಿಸಲಿ. ಅವರ ಬಗ್ಗೆ ನನ್ನ ಬಳಿ ಸಾಕಷ್ಟು ಅಸ್ತ್ರಗಳಿವೆ. ಯಾವಾಗ ಯಾರ ಮೇಲೆ ಶಸ್ತ್ರಾಸ್ರ ಹೂಡಬೇಕು ಎಂಬುದು ನನಗೆ ಗೊತ್ತಿದೆ. ಆಗ ಪ್ರಯೋಗ ಮಾಡುತ್ತೇನೆ. ನಾನು ಬ್ಲಾಕ್ ಮೇಲ್ ಮಾಡುವುದಿಲ್ಲ. ಆದರೆ ನನ್ನ ಬಗ್ಗೆ ಹೇಳಿದರೆ ನಾನು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT