ಎಸ್‌.ಎಸ್‌. ಬಡಾವಣೆ ನಗರಕ್ಕೆ ಮಾದರಿಯಾಗಲಿ

7
‘ಸ್ವಚ್ಛ, ಸುಂದರ ಬಡಾವಣೆ’ ಕಾರ್ಯಕ್ರಮದಲ್ಲಿ ಆಯುಕ್ತ ಮಂಜುನಾಥ ಬಳ್ಳಾರಿ

ಎಸ್‌.ಎಸ್‌. ಬಡಾವಣೆ ನಗರಕ್ಕೆ ಮಾದರಿಯಾಗಲಿ

Published:
Updated:
Deccan Herald

ದಾವಣಗೆರೆ: ಇಡೀ ದಾವಣಗೆರೆ ನಗರಕ್ಕೆ ಸ್ವಚ್ಛತೆ ಮತ್ತು ಕಸ ನಿರ್ವಹಣೆಯಲ್ಲಿ ಎಸ್.ಎಸ್. ಬಡಾವಣೆ ಮಾದರಿ ಆಗಬೇಕು. ನಂತರ ರಾಜ್ಯಕ್ಕೆ ದಾವಣಗೆರೆ ನಗರ ಮಾದರಿಯಾಗಬೇಕು. ಈ ರೀತಿಯ ಸಹಕಾರ ಜನರು ನೀಡಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಮನವಿ ಮಾಡಿದರು.

ನಗರದ ಅಥಣಿ ಕಾಲೇಜಿನಲ್ಲಿ ಬುಧವಾರ ‘ಸ್ವಚ್ಛ, ಸುಂದರ ಬಡಾವಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐದಾರು ತಿಂಗಳಿನಿಂದ ನಗರದಲ್ಲಿ ವ್ಯವಸ್ಥಿತ ಕಸ ಸಂಗ್ರಹಣೆ, ಯುಜಿಡಿ ವ್ಯವಸ್ಥೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವ ಕೆಲಸಗಳು ನಡೆಯುತ್ತಿವೆ. ಇದೇ ರೀತಿಯಲ್ಲಿ ವ್ಯವಸ್ಥೆಗೆ ಜನರು ಸಹಕಾರ ನೀಡಬೇಕು. ಸ್ವಚ್ಛ ನಗರ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

‘ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಶೇ 80ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೂ ಅದರ ನಿರ್ವಹಣೆ ಅವರಿಗೆ ಸವಾಲಾಗಿಲ್ಲ. ಪ್ಲಾಸ್ಟಿಕ್ ಕಸವನ್ನು ಮರುಬಳಕೆ ಮಾಡುವ ತಂತ್ರಜ್ಞಾನ ಅವರಿಗೆ ತಿಳಿದಿದೆ. ಆದರೆ, ದಾವಣಗೆರೆಯಲ್ಲಿ ಶೇ 20ರಷ್ಟು ಪ್ಲಾಸ್ಟಿಕ್ ಕಸ ಉತ್ಪತ್ತಿ ಆಗುತ್ತಿದ್ದರೂ ಅದರ ನಿರ್ವಹಣೆ ನಮಗೆ ಸವಾಲಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್, ‘ವಿದೇಶಗಳಲ್ಲಿ ಅಲ್ಲಿನ ಜನರು ಕಾನೂನುಗಳನ್ನು ಪಾಲಿಸುತ್ತಾರೆ. ಆದರೆ, ನಮ್ಮಲ್ಲಿ ಕಾನೂನುಗಳನ್ನು ಹೇಳುತ್ತಾರೆ. ಅಂಥಹ ರೀತಿ, ನೀತಿಗಳು ಕೂಡ ನಮ್ಮಲಿ ಬರಬೇಕು. ಆಗ ಮಾತ್ರ ಸ್ವಚ್ಛ, ಸುಂದರ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಡಾ. ಸುರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವಚ್ಛತಾ ಅಭಿಯಾನದ ಕಾರ್ಯಕರ್ತೆ ಅಧ್ಯಕ್ಷತೆ ಡಾ. ಶಾಂತಾ ಭಟ್ ವಹಿಸಿದ್ದರು. ಪಾಲಿಕೆ ಸದಸ್ಯ ಎನ್. ತಿಪ್ಪಣ್ಣ, ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಸುಂಕದ್ ಅವರೂ ಇದ್ದರು.

–––

ಅಂಕಿ ಅಂಶ

41 ವಾರ್ಡ್‌ಗಳು - ದಾವಣಗೆರೆ ಪಾಲಿಕೆ ವ್ಯಾಪ್ತಿ

160 ಟನ್‌ - ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ

ಶೇ 20 - ತ್ಯಾಜ್ಯದಲ್ಲಿನ ಪ್ಲಾಸ್ಟಿಕ್‌ ಪ್ರಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !