ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: 1,871 ವಿದ್ಯಾರ್ಥಿಗಳು ತೇರ್ಗಡೆ

Published 10 ಜುಲೈ 2024, 16:17 IST
Last Updated 10 ಜುಲೈ 2024, 16:17 IST
ಅಕ್ಷರ ಗಾತ್ರ

ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 1,871 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 5,371 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 1,871 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಜಿಲ್ಲೆಗೆ ಶೇ 34.84 ಫಲಿತಾಂಶ ಬಂದಿದೆ.

3,461 ವಿದ್ಯಾರ್ಥಿಗಳು ಹಾಗೂ 1,910 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಅದರಲ್ಲಿ 1,029 ವಿದ್ಯಾರ್ಥಿಗಳು ಹಾಗೂ 842 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 

ಹರಿಹರದಲ್ಲಿ 6 ವಿದ್ಯಾರ್ಥಿಗಳು ರ‌್ಯಾಂಕ್‌ ಪಡೆದಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 5, ದಾವಣಗೆರೆ ಉತ್ತರದಲ್ಲಿ 4, ಜಗಳೂರಿನಲ್ಲಿ 3, ಹೊನ್ನಾಳಿಯಲ್ಲಿ 2 ಹಾಗೂ ಚನ್ನಗಿರಿಯಲ್ಲಿ ಒಬ್ಬರು ರ‍್ಯಾಂಕ್‌ ಪಡೆದಿದ್ದಾರೆ.

ಫಲಿತಾಂಶದ ವಿವರ

ಬ್ಲಾಕ್‌; ಪರೀಕ್ಷೆಗೆ ಹಾಜರಾದವರು; ಉತ್ತೀರ್ಣರಾದವರು

ಚನ್ನಗಿರಿ;1,135;451

ಹೊನ್ನಾಳಿ;577;212

ಜಗಳೂರು;729;267

ದಾವಣಗೆರೆ ಉತ್ತರ;808;285

ದಾವಣಗೆರೆ ದಕ್ಷಿಣ;1,008;349

ಹರಿಹರ;1,114;307

ಒಟ್ಟು;5,371;1871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT