ಶುಕ್ರವಾರ, ನವೆಂಬರ್ 15, 2019
27 °C

ಪ್ರೇಮ ವಿಚಾರ: ಒಂದೇ ಕುಟುಂಬದ ನಾಲ್ವರು ವಿಷ ಸೇವನೆ

Published:
Updated:

ಉಚ್ಚಂಗಿದುರ್ಗ: ಇಲ್ಲಿಗೆ ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಸೋಮವಾರ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಣಜಿಗೆರೆ ಗ್ರಾಮದ ಹನುಮಂತಪ್ಪ ಹಾಗೂ ಹನುಮಕ್ಕ ದಂಪತಿಯ ಮಗ ರಂಗನಾಥ ಅದೇ ಗ್ರಾಮದ ಅಂಜಿನಪ್ಪ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಯುವತಿಯ ತಂದೆಯು ರಂಗನಾಥ ಅವರ ಪೋಷಕರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ರಂಗನಾಥ (22), ಆತನ ಹೆತ್ತವರಾದ ಹನುಮಂತಪ್ಪ (53), ಹನುಮಕ್ಕ(46), ಸಹೋದರ ಮಲ್ಲಿಕಾರ್ಜುನ್ (24) ಗೊಲ್ಲರಹಳ್ಳಿಯಲ್ಲಿ ವಿಷ ಸೇವಿಸಿದ್ದಾರೆ. ಅಸ್ವಸ್ಥರಾದ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)