ಗುರುವಾರ , ಮೇ 13, 2021
39 °C

ಸಿಡಿಲು ಬಡಿದು ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಯಕೊಂಡ: ಸಮೀಪದ ಹುಚ್ಚವ್ವನಹಳ್ಳಿ ವಡ್ಡರಹಟ್ಟಿಯಲ್ಲಿ ಮಂಗಳವಾರ ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿದ್ದಾರೆ.

ಹುಚ್ಚವ್ವನಹಳ್ಳಿ ವಡ್ಡರಹಟ್ಟಿಯ ರವಿಕುಮಾರ್ (35) ಮತ್ತು ರಮೇಶ್ (36) ಮೃತಟ್ಟವರು‌. ಇವರು ಹುಚ್ವವ್ಬನಹಳ್ಳಿಯ ಕೆರೆ ಬಳಿಯ ಅವರ ಜಮೀನಿಗೆ ಕಲ್ಲು ಆರಿಸಲು ಹೋಗಿದ್ದರು. ಸಂಜೆ ಇದ್ದಕ್ಕಿದ್ದಂತೆ ಗುಡುಗು, ಸಿಡಿಲಿನೊಂದಿಗೆ ಮಳೆ ಆರಂಭವಾಯಿತು. ಹತ್ತಿರದಲ್ಲಿದ್ದ ಮರದ‌ ಕೆಳಗೆ ನಿಂತಿದ್ದ ಇವರಿಗೆ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇವರೊಂದಿಗೆ ಮರದ ಕೆಳಗೆ ನಿಂತಿದ್ದ ಹರೀಶ್ ಎಂಬುವವರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ರವಿಕುಮಾರ್ ಮತ್ತು ರಮೇಶ್ ಅವರ ಸಾವಿನಿಂದ ಕುಟುಂಬ ದಿಕ್ಕುಗಾಣದಂತಾಗಿದೆ.

ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ₹ 5ಲಕ್ಷ ಪರಿಹಾರವನ್ನು ಶೀಘ್ರ ಕೊಡಿಸಲಾಗುವುದು’ ಎಂದು ತಹಶೀಲ್ದಾರ್ ಬಿ.ಎನ್‌.ಗಿರೀಶ್ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು