ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ವಿತರಣೆಯಲ್ಲಿ ಲೋಪವಾಗಬಾರದು- ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್

ತರಬೇತಿ ಕಾರ್ಯಕ್ರಮದಲ್ಲಿ ಎಚ್ಚರಿಕೆ
Last Updated 1 ಮೇ 2022, 4:24 IST
ಅಕ್ಷರ ಗಾತ್ರ

ಹರಿಹರ: ಸರ್ಕಾರ ರಸಗೊಬ್ಬರದ ಖರೀದಿಗೆ ನೀಡುತ್ತಿರುವ ರಿಯಾಯಿತಿ ದರದ ಲಾಭವನ್ನು ರೈತರಿಗೆ ಪೂರ್ಣವಾಗಿ ದೊರಕಿಸುವಜವಾಬ್ದಾರಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಮಾರಾಟಗಾರರ ಮೇಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಪರಿಕರ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಕಾರ್ಯಾಗಾರ ಮತ್ತು ಕೃಷಿ ಕಾಯ್ದೆಗಳ ಕುರಿತು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು.

‘ಜಿಲ್ಲೆಗೆ ಬೇಡಿಕೆ ಪ್ರಮಾಣದ ರಸಗೊಬ್ಬರ ಪಡೆಯಲು ಪಿಒಎಸ್ ಯಂತ್ರದಲ್ಲಿ ಭೌತಿಕ ದಾಸ್ತಾನಿಗೆ ಅನುಗುಣವಾಗಿ ನಿರಂತರವಾಗಿ ಅಪ್‌ಡೇಟ್ ಮಾಡಬೇಕು. ಸರಬರಾಜನ್ನು ಆಧರಿಸಿ ಎಲ್ಲಾ ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ವಿತರಣೆ ಮಾಡಬೇಕು’ ಎಂದು ಸೂಚಿಸಿದರು.

ಉಪ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಮಾತನಾಡಿ, ‘ಎಲ್ಲಾ ಮಾರಾಟಗಾರರು ತಮ್ಮ ಮಳಿಗೆಯಲ್ಲಿ ಅಧಿಕೃತ ದಾಖಲೆಗಳನ್ನು, ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ತಾಲ್ಲೂಕಿನ ಮಾರಾಟಗಾರರು
ಬೇರೆ ತಾಲ್ಲೂಕಿನವರಿಗೆ ಪರಿಕರ ಮಾರಾಟ ಮಾಡಬಾರದು. ಇಂತಹ ಪ್ರಕರಣ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಜಾರಿದಳ ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಮತ್ತು ಗೋವರ್ಧನ್ ವಿ.ಪಿ. ಅವರು ರಸಗೊಬ್ಬರ, ಕ್ರಿಮಿನಾಶಕ ಮತ್ತುಬಿತ್ತನೆ ಬೀಜದ ಕಾಯ್ದೆಗಳು ಕುರಿತು ಉಪನ್ಯಾಸ ನೀಡಿದರು. ಸದರಿ ಕಾಯ್ದೆಗಳನ್ನು ಉಲ್ಲಂಘಿಸಿದರೆ ಎದುರಿಸಬೇಕಾದ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು.

ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಕರಿಬಸಯ್ಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಜಿ.ಪಿ. ರೇಖಾ, ಸಹಾಯಕ ಕೃಷಿ ನಿರ್ದೇಶಕರಾದ ನಾರನಗೌಡ ಎ.,ಕೃಷಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕೆ., ಇನಾಯತ್ ಎಚ್.ಆರ್., ಪೂರ್ಣಶ್ರೀ ಎಂ. ಬಡಿಗೇರ್, ಆತ್ಮ ಯೋಜನೆಯ ಅಧಿಕಾರಿಗಳಾದ ಯೋಗೇಶಗೌಡ, ರಾಕೇಶ ಎಂ.ವಿ. ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT