ರಾಜ್ಯ ಸರ್ಕಾರ ಶೇ 7.5 ರಷ್ಟು ಮೀಸಲಾತಿ ನೀಡುವಂತೆ ವಾಲ್ಮೀಕಿ ಸಮಾಜ ಆಗ್ರಹ 

7

ರಾಜ್ಯ ಸರ್ಕಾರ ಶೇ 7.5 ರಷ್ಟು ಮೀಸಲಾತಿ ನೀಡುವಂತೆ ವಾಲ್ಮೀಕಿ ಸಮಾಜ ಆಗ್ರಹ 

Published:
Updated:
Deccan Herald

ಹೊನ್ನಾಳಿ : ವಾಲ್ಮೀಕಿ ಸಮುದಾಯಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಶೇ 7.5 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಇದು ಸರಿಯಲ್ಲ ಎಂದು ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಸೋಮಶೇಖರ್ ಹೇಳಿದರು.

ಶನಿವಾರ ಶಿರಸ್ತೇದಾರ್ ರಂಗಪ್ಪ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆಶಯದಂತೆ ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಆದರೆ ರಾಜ್ಯ ಸರ್ಕಾರ ಅದನ್ನು ಕೊಡುವಲ್ಲಿ ತಾರತಮ್ಯ ಮಾಡುತ್ತಿದೆ. ಈಗ ನೀಡುತ್ತಿರುವ ಶೇ 3 ರ ಮೀಸಲಾತಿಯಲ್ಲಿ ಪರಿಶಿಷ್ಟೇತರ ಪಂಗಡದವರು ನಕಲು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ತಾಲ್ಲೂಕು ಪಂಚಾತಿಯಿ ಸದಸ್ಯ ಕೆ.ಎಲ್. ರಂಗಪ್ಪ ಮಾತನಾಡಿ, ಮದಕರಿ ನಾಯಕ ಆಳಿದ ಚಿತ್ರದುರ್ಗ ಜಿಲ್ಲೆಯಲ್ಲಿರುವ ವಿಶ್ವ ವಿದ್ಯಾನಿಲಯಕ್ಕೆ ಮದಕರಿ ನಾಯಕ ಅಥವಾ ವಾಲ್ಮೀಕಿ ಮಹರ್ಷಿ ಅವರ ಹೆಸರಿಡಬೇಕು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ ಜಾತಿ ವಿವಾಹವಾಗುತ್ತಿರುವ ಎಸ್ಸಿ ಸಮುದಾಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ವಾಲ್ಮೀಕಿ ಸಮುದಾಯದವರಿಗೂ ನೀಡಬೇಕು ಎಂದರು.

ತಾಲ್ಲೂಕು ವಾಲ್ಮೀಕಿ ಸಮಾಜದ ಖಜಾಂಚಿ ಕೇಶವಮೂರ್ತಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಪ್ರಾಧಿಕಾರ ರಚಿಸಿದಂತೆ ವೀರ ಸೇನಾನಿ ಸಿಂಧೂರ ಲಕ್ಷ್ಮಣ್ ಅವರ ಹೆಸರಿನಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಧಿಕಾರ ರಚಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಜೀವೇಶಪ್ಪ, ಉಪಾಧ್ಯಕ್ಷ ಕೋಣನತಲೆ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಮಂಜುನಾಥ್ ಹಾಗೂ ವಾಲ್ಮೀಕಿ ಸಮುದಾಯದ ನೂರಾರು ಮುಖಂಡರು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !