ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಹಳ್ಳಿ: ವಾಲ್ಮೀಕಿ ಜಾತ್ರೆ ನಾಳೆಯಿಂದ

ಅಂತಿಮ ಹಂತದ ಸಿದ್ಧತೆ: ನಾಯಕ ಸಮುದಾಯದ ಸಂಘಟನೆ, ಸಾಂಸ್ಕೃತಿಕ ಎಚ್ಚರ
Published 7 ಫೆಬ್ರುವರಿ 2024, 7:45 IST
Last Updated 7 ಫೆಬ್ರುವರಿ 2024, 7:45 IST
ಅಕ್ಷರ ಗಾತ್ರ

ಹರಿಹರ: ‘ಫೆಬ್ರುವರಿ 8 ಮತ್ತು 9ರಂದು ನಡೆಯುವ 6ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣ ಸಿದ್ಧಗೊಂಡಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್  ಹಾಗೂ ಹಲವು ಸಚಿವರು, ಮಾಜಿ ಮುಖ್ಯಮಂತ್ರಿಗಳು, ಶಾಸಕರು, ನಾಡಿನ ವಿವಿಧ ಮಠಾಧೀಶರು, ಚಿಂತಕರು, ಸಾಹಿತಿಗಳು, ಲೇಖಕರು, ನಟರು ಎರಡು ದಿನಗಳ ಮಹೋತ್ಸವದಲ್ಲಿ ಭಾಗವಹಿಸುವರು.  

ಫೆ.8ರ ಕಾರ್ಯಕ್ರಮ: ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಫೆ.8 ರಂದು ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಶ್ರೀ ಮಹರ್ಪಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಮ್ಮ ಯಲ್ಲಪ್ಪ, ಸದಸ್ಯರು, ಗ್ರಾಮದ ಹಿರಿಯರು ಧ್ವಜಾರೋಹಣ ನೆರೆವೇರಿಸುವರು. ಸಚಿವ, ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಮಿತಿ ಸಂಚಾಲಕ ಬಿ.ಶಿವಪ್ಪ, ಗುರುಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಉಪಸ್ಥಿತರಿರುವರು. 

8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ, 9.30ಕ್ಕೆ ಉದ್ಯೋಗ ಮೇಳ, 10.30ಕ್ಕೆ ಕೃಷಿ ವಸ್ತು  ಪ್ರದರ್ಶನ ಉದ್ಘಾಟನೆ ನಡೆಯಲಿದೆ. ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30ರ ವರೆಗೆ ಮಹಿಳಾ ಗೋಷ್ಠಿ, ಸಾಧಕ ಮಹಿಳೆಯರಿಗೆ ಗೌರವ ಸಮರ್ಪಣೆ, ಮಧ್ಯಾಹ್ನ 2.30ರಿಂದ ಸಂಜೆ 5.30ರ ವರೆಗೆ ನೌಕರರ ಗೋಷ್ಠಿ, ಸಂಜೆ 6ರಿಂದ 8.30ರ ವರೆಗೆ ‘ಎಸ್‌ಸಿ ಮತ್ತು ಎಸ್‌ಟಿ ಒಂದಾಗಬೇಕು ಏಕೆ’? ವಿಷಯ ಕುರಿತು ಸಂಘಟನಾ ಗೋಷ್ಠಿ, ರಾತ್ರಿ 8.30ರಿಂದ ಕರಪಾಲ ಮೇಳ ಜಾನಪದ ನೃತ್ಯ, ರಾತ್ರಿ 10.30ರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ನಡೆಯಲಿದೆ. 

ಫೆ.9ರ ಕಾರ್ಯಕ್ರಮ: ಬೆಳಿಗ್ಗೆ 6ರಿಂದ 7ರ ವರೆಗೆ ಸ್ವಚ್ಛತಾ ಕಾರ್ಯದ ನಂತರ ಬೆಳಿಗ್ಗೆ 9ಕ್ಕೆ 63 ಅಡಿ ಎತ್ತರದ ಭವ್ಯ ತೇರಿನ ರಥೋತ್ಸವ, ಬೆಳಿಗ್ಗೆ 9.30ರಿಂದ ನಡೆಯುವ ಧರ್ಮ ಸಭೆಯಲ್ಲಿ ನಾಡಿನ ವಿವಿಧ ಮಠಾಧೀಶರು  ಭಾಗವಹಿಸುವರು. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ. 

ಮಧ್ಯಾಹ್ನ 12.30ರಿಂದ ನಡೆಯುವ ಜನ ಜಾಗೃತಿ ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಾಲಿ, ಮಾಜಿ ಸಚಿವರು, ಸಂಸದರು, ಶಾಸಕರು, ಮುಖಂಡರು ಭಾಗವಹಿಸುವರು.

ಅನ್ನ ದಾಸೋಹಕ್ಕಾಗಿ 500 ಜನ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. 100ಕ್ಕೂ ಹೆಚ್ಚು ಊಟದ ಕೌಂಟರ್ ಸ್ಥಾಪಿಸಲಾಗುತ್ತಿದೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಮಹಾದ್ವಾರ 
ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಮಹಾದ್ವಾರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT