ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತರಾಗಿ ಬಂದ ಬಿಎಸ್‍ಎಫ್ ಯೋಧರಿಗೆ ಅದ್ದೂರಿ ಸ್ವಾಗತ

ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಸೈನಿಕರಿಬ್ಬರನ್ನು ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಿದ ಅಭಿಮಾನಿಗಳು
Last Updated 6 ಜನವರಿ 2022, 4:50 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಬಂದ ಬಿಎಸ್‌ಎಫ್ ಯೋಧರಾದ ನಾಗರಾಜ ಮತ್ತು ರಾಘವೇಂದ್ರ ಅವರಿಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ನಾಗರಾಜ ಅವರು 27 ವರ್ಷ ಸೇವೆ ಸಲ್ಲಿಸಿದ್ದಾರೆ. ರಾಘವೇಂದ್ರ 21 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ದೇಶಕ್ಕಾಗಿ ವೈಯಕ್ತಿಕ ಬದುಕನ್ನೇ ಮರೆತು ಕರ್ತವ್ಯ ನಿರ್ವಹಿಸಿರುವ ಈ ಇಬ್ಬರೂ ಅಭಿನಂದನೀಯರು ಎಂದು ಮೇಯರ್‌ ಎಸ್.ಟಿ. ವೀರೇಶ ಶ್ಲಾಘಿಸಿದರು.

ನಿವೃತ್ತ ಯೋಧ ನಾಗರಾಜ ಮಾತನಾಡಿ, ‘ದೇಶ ಸೇವೆ ಮಾಡಲು ಎಲ್ಲರೂ ಮುಂದೆ ಬರಬೇಕು. ಎಲ್ಲರ ಮನೆಯಿಂದ ಯುವಕರು ಸೈನ್ಯಕ್ಕೆ ಸೇರುವಂತಾಗಬೇಕು. ನಾವು ನಮ್ಮ ದೇಶಕ್ಕಾಗಿ ಮಾಡಿದ ಸೇವೆ ನಮಗೆ ತೃಪ್ತಿ ತಂದಿದೆ. ನಮಗೆ ಯಾವ ಸನ್ಮಾನಗಳೂ ಬೇಡ. ನಮ್ಮ ಸೇವೆಯೇ ಯುವಜನರಿಗೆ ಪ್ರೇರಣೆಯಾಗಲಿ’ ಎಂದು ಹೇಳಿದರು.

ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ, ‘ರಾಘವೇಂದ್ರ ಹಾಗೂ ನಾಗರಾಜ ಈ ಯೋಧರು ತಮ್ಮ ಅಮೂಲ್ಯವಾದಂತಹ ಸೇವೆಯನ್ನು ನಮ್ಮ ದೇಶಕ್ಕಾಗಿ ಸಲ್ಲಿಸಿ ತಮ್ಮ ವೈಯಕ್ತಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರು ನಮ್ಮ ದಾವಣಗೆರೆ ಜಿಲ್ಲೆಯವರು ಎಂಬುದು ಸಂತಸದ ವಿಚಾರ. ಗಡಿಯಲ್ಲಿ ಸೈನಿಕರು ಚೆನ್ನಾಗಿ ಕೆಲಸ ಮಾಡಿದರೆ ನಾವು ಪೊಲೀಸರು ದೇಶದ ಒಳಗಡೆ ಇರುವ ದುಷ್ಟರಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಎಂ.ನಾಗರಾಜ, ಎಂ. ನಾರಾಯಣ ಸ್ವಾಮಿ, ವಾರ್ತಾ ಇಲಾಖೆಯ ಬಿ.ಎಸ್. ಬಸವರಾಜ, ಶ್ರೀಧರ, ಯುವ ಬ್ರಿಗೇಡ್ ಕಾರ್ಯಕರ್ತ ಪವನ್ ಪ್ರೇರಣ, ಜಿ.ಬಿ. ಸುರೇಶ, ಸತೀಶ, ಧನರಾಜ್, ರಮೇಶ, ಮಂಜುನಾಥ, ಅಮೃತ, ಹನುಮಂತಪ್ಪ, ಶಿವಕುಮಾರ, ಪರಶುರಾಮ, ಗಿರೀಶ, ಶಂಕರ ಗಣೇಶ, ಹರೀಶ ಪವಾರ್, ಯೋಗೀಶ, ರಾಜು, ಶಿವು, ನೀಲಮ್ಮನ ತೋಟದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾ ಸಮಿತಿ, ವಂದೇ ಮಾತರಂ ಕ್ರೀಡಾ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಕಬ್ಬಡ್ಡಿ ಕ್ರೀಡಾ ಸಮಿತಿ, ಮಾಜಿ ಸೈನಿಕರ ಂಘ, ಜಿಲ್ಲಾ ಪ್ಯಾರ ಮಿಲಿಟರಿ ಯೋಧರ ಸಂಘ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಪದಾಧಿಕಾರಿಗಳು, ಸ್ನೇಹಿತರು, ಯೋಧರ ಬಂಧಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT