ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮುನ್ನ ಕಾಮಗಾರಿಗಳು ಪೂರ್ಣ: ಶಾಮನೂರು ಶಿವಶಂಕರಪ್ಪ

Last Updated 28 ಸೆಪ್ಟೆಂಬರ್ 2022, 4:38 IST
ಅಕ್ಷರ ಗಾತ್ರ

ದಾವಣಗೆರೆ: ಮುಂದಿನ ವಿಧಾನಸಭಾ ಚುನಾವಣೆಗೆ 2023ರಲ್ಲಿ ದಿನಾಂಕ ಘೋಷಣೆ ಆಗುವ ಮುನ್ನವೇ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ವಿವಿಧ ಯೋಜನೆಯಡಿ ₹ 1.06 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆಯ ಅನುದಾನದಡಿ ₹ 40 ಲಕ್ಷ ವೆಚ್ಚದಲ್ಲಿ 12ನೇ ವಾರ್ಡ್‌ನ ಅಹಮ್ಮದ್ ನಗರ 1 ಮತ್ತು 4ನೇ ಕ್ರಾಸ್‍ನಲ್ಲಿ ಸಿ.ಸಿ. ಚರಂಡಿ ಅಭಿವೃದ್ಧಿ ಕಾಮಗಾರಿ, ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ₹ 50 ಲಕ್ಷ ವೆಚ್ಚದಲ್ಲಿ ವೆಂಕಾಭೋವಿ ಕಾಲೊನಿ 2, 3 ಮತ್ತು 7 ಕ್ರಾಸ್‌ಗಳಲ್ಲಿ ಸಿ.ಸಿ. ಚರಂಡಿ ನಿರ್ಮಿಸಿ ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಮತ್ತು ಶಾಸಕರ ಅನುದಾನದಲ್ಲಿ ₹ 16.50 ಲಕ್ಷ ವೆಚ್ಚದಲ್ಲಿ 21ನೇ ವಾರ್ಡ್‌ನಲ್ಲಿ ಬಸಾಪುರ ಹರೀಶ್ ಮನೆ ಮುಂಭಾಗದಿಂದ ಹೈಸ್ಕೂಲ್ ರಸ್ತೆಯವರೆಗೆ ಸಿ.ಸಿ. ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ.ಎಸ್. ಮಂಜುನಾಥ್, ಸದಸ್ಯರಾದ ಜಾಕೀರ್ ಅಲಿ, ಕೆ. ಚಮನ್‍ಸಾಬ್, ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ, ಮುಖಂಡರಾದ ಎಂ.ಎಸ್. ಕೊಟ್ರಯ್ಯ, ಯಾಸೀನ್ ಪೀರ್ ರಜ್ವಿ ಮಾತನಾಡಿದರು.

ಪಾಲಿಕೆ ಸದಸ್ಯರಾದ ಹುರ್‌ಬಾನು, ಶಿವಲೀಲಾ ಕೊಟ್ರಯ್ಯ, ಎ.ಬಿ. ರಹೀಂ, ಬಿ.ಎಸ್. ಮರುಳಪ್ಪ, ಮಾಜಿ ಸದಸ್ಯರಾದ ಶಫೀಕ್ ಪಂಡಿತ್, ಮುನ್ನಾ ಪೈಲ್ವಾನ್, ಅಲ್ಲಾಭಕ್ಷಿ, ಎಚ್. ಜಯಣ್ಣ, ಅಕ್ಬರ್ ಸಾಬ್, ಅನ್ವರ್ ಸಾಬ್, ಶೌಕತ್, ಮೆಕ್ಯಾನಿಕ್ ಮುಸ್ತಾಕ್, ಅರ್ಚನಾ ಜಾಕೀರ್, ಮೊಟ್ಟೆ ದಾದಾಪೀರ್, ರಾಜು, ಮಲ್ಲಿಕಾರ್ಜುನ ಸ್ವಾಮಿ, ಗಂಗಾಧರ್, ಹರೀಶ್ ಕೆ.ಎಲ್. ಬಸಾಪುರ, ಸಿ.ಮಹೇಶ್ವರಪ್ಪ, ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT