ಭಾನುವಾರ, ಡಿಸೆಂಬರ್ 15, 2019
21 °C

ಕುಸ್ತಿ: ಪ್ರವೀಣ್ ಹಿಪ್ಪರಗಿಗೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹರಿಯಾಣದ ಹಿಸ್ಸಾರ್‌ನಲ್ಲಿ ಈಚೆಗೆ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಗ್ರೆಕೊ ರೊಮನ್ ಕುಸ್ತಿಯಲ್ಲಿ 72 ಕೆಜಿ ವಿಭಾಗದಲ್ಲಿ ಬೆಳ್ಳಿಪದಕ ಪ್ರವೀಣ್ ಹಿಪ್ಪರಗಿ ಪಡೆದರು.

 92 ಕೆ.ಜಿ ವಿಭಾಗದಲ್ಲಿ ಬಸವರಾಜ್ ಎಚ್ ಕಂಚಿನ ಪದಕ ಪಡೆದರು. 19 ವರ್ಷದೊಳಗಿನವರ ಸ್ಕೂಲ್‌ ಗೇಮ್ಸ್‌ನಲ್ಲಿ 65 ಕೆ.ಜಿ ವಿಭಾಗದಲ್ಲಿ ಮಾರೆಪ್ಪ ಟಿ. ಕಂಚಿನ ಪದಕ ಪಡೆದರೆ, 17 ವರ್ಷದೊಳಗಿನ 48 ಕೆಜಿ ವಿಭಾಗದಲ್ಲಿ ಸಂಜೀವ ಕೆ. 14 ವರ್ಷದೊಳಗಿನ ವಿಭಾಗದಲ್ಲಿ ಪರಶುರಾಮಪ್ಪ ವಿ. ಅವರು 45 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದರು.

ವಿಜೇತರು ದಾವಣಗೆರೆ ಕ್ರೀಡಾ ನಿಲಯದ ವಿದ್ಯಾರ್ಥಿಗಳು. ವಿಜೇತರನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಸನ್ಮಾನಿಸಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕುಸ್ತಿ ತರಬೇತುದಾರರಾದ ಶಿವಾನಂದ್, ವಿನೋದ್ ಇದ್ದರು.

ಪ್ರತಿಕ್ರಿಯಿಸಿ (+)