ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಪಂದ್ಯಾವಳಿ: ವಿವಿಧ ಜಿಲ್ಲೆಗಳ ಪೈಲ್ವಾನರು ಭಾಗಿ

Last Updated 2 ಡಿಸೆಂಬರ್ 2022, 4:50 IST
ಅಕ್ಷರ ಗಾತ್ರ

ಹೊನ್ನಾಳಿ: ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವ, ಮುಳ್ಳು ಪಲ್ಲಕ್ಕಿ ಉತ್ಸವ ಹಾಗೂ ಕೆಂಡದಾರ್ಚನೆ ಅಂಗವಾಗಿ ಏರ್ಪಡಿಸಿರುವ ಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಲಾಯಿತು.

ಗುರುವಾರ ನಡೆದ ಎರಡನೇ ದಿನದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡ, ಬೆಳಗಾವಿ, ದಾವಣಗೆರೆ, ಕಲಬುರಗಿ, ರಾಣೆಬೆನ್ನೂರು, ಚಿಂಚಿಲಿ, ಹಾವೇರಿ, ಶಿವಮೊಗ್ಗ, ಉಕ್ಕಡಗಾತ್ರಿ ಸೇರಿದಂತೆ ಸುತ್ತಮುತ್ತಲಿನ ಪೈಲ್ವಾನರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಬಾರಿ ಬಹುತೇಕ ಯುವಕರೇ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪೈಲ್ವಾನ್ ಎಚ್.ಬಿ.ಗಿಡ್ಡಪ್ಪ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು.

ಮೊದಲನೇ ದಿನದ ಕುಸ್ತಿ ಪಂದ್ಯದ ಖರ್ಚನ್ನು ಎಚ್.ಬಿ. ಗಿಡ್ಡಪ್ಪ ಮತ್ತು ಮಕ್ಕಳು, ಎರಡನೇ ದಿನದ ಕುಸ್ತಿ ಪಂದ್ಯಾವಳಿಯ ಖರ್ಚನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ದಿವಂಗತ ಗಂಗಾಧರಪ್ಪ ಅವರ ಸ್ಮರಣಾರ್ಥ ಸುದೀಪ್ ಗಂಗಾ ಸಾಮಿಲ್ ಮಾಲೀಕರು ವಹಿಸಿಕೊಂಡಿದ್ದರು.

ಇಂದು ಅಂತಿಮ ಪಂದ್ಯ: ಕೊನೆಯ ದಿನದ ಕುಸ್ತಿ ಪಂದ್ಯಗಳು ಶುಕ್ರವಾರ ನಡೆಯಲಿದ್ದು, ಇದರ ಖರ್ಚನ್ನು ಕಮಿಟಿಯಿಂದ ಭರಿಸಲಾಗುವುದು ಎಂದು ಕುಸ್ತಿ ಸಮಿತಿ ಗೌರವಾಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಅಧ್ಯಕ್ಷ ಎಚ್.ಡಿ.ವಿಜೇಂದ್ರಪ್ಪ ಹೇಳಿದರು.

₹ 1,000ದಿಂದ
₹ 10,000ದವರೆಗೂ ಬಹುಮಾನದ ಮೊತ್ತವನ್ನು ಘೋಷಿಸಿ ಪೈಲ್ವಾನರಿಗೆ ನೀಡಲಾಯಿತು

ಊಟ ವಸತಿ: ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿಯಿಂದ ಕುಸ್ತಿಪಟುಗಳಿಗೆ
ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಎಚ್.ಬಿ.ಗಿಡ್ಡಪ್ಪ ತಿಳಿಸಿದರು.

ವೇದಿಕೆ ಮೇಲೆ ಗೌಡ್ರು ನರಸಪ್ಪ, ಬುದ್ದಿವಂತ ನರಸಿಂಹಪ್ಪ, ಯಜಮಾನ್ ತೆಂಗಿನಮರದ ಮಾದಪ್ಪ, ದೇವರಗಣ ಮಕ್ಕಳಾದ ಅಣ್ಣಪ್ಪ ಸ್ವಾಮಿ, ಪುರಸಭೆ ಅಧ್ಯಕ್ಷ ರಂಗನಾಥ್, ಸಿಪಿಐ ಸಿದ್ದೇಗೌಡ, ಎಚ್.ಡಿ.ಪ್ರಭು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ಮಹೇಶ್, ಎಂ.ರಮೇಶ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗಾಳಿ ನಾಗರಾಜ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಮಾಜಿ ಸೈನಿಕ ಎಂ.ವಾಸಪ್ಪ, ಕಾಟ್ಯಾ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT