ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಶಿವನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು * ಪ್ರಯೋಗಾಲಯಕ್ಕೆ

ಹಳದಿ ನೀರು: ಪತ್ತೆಯಾಗದ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಿವನಗರದಲ್ಲಿ ಹಳದಿ ನೀರು ಬಂದ ಪ್ರದೇಶಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಶಿವನಗರದ 4ನೇ ಕ್ರಾಸ್‌ ಮತ್ತು ಸುತ್ತಮುತ್ತಲ ಮನೆಗಳಿಗೆ ಪೂರೈಕೆಯಾಗಿದ್ದ ನೀರು ಹಳದಿಯಾಗಿತ್ತು. ಮಳೆಗಾಲದಲ್ಲಿ ಕೆಂಪು ನೀರು ಬರುವುದು ಸಹಜ. ಹಳದಿ ನೀರು ಕಂಡು ಜನರು ಕಂಗಾಲಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಮಂಗಳವಾರ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಎಂಜಿನಿಯರ್‌, ಸಿಬ್ಬಂದಿ ಭೇಟಿ ನೀಡಿದರು.

‘ಚರಂಡಿಗಳ ನಡುವೆ ಸ್ವಚ್ಛತೆ ಇಲ್ಲದ ಕಡೆಗಳಲ್ಲಿಯೂ ನಲ್ಲಿ, ಪೈಪ್‌ಲೈನ್‌ ಇರುವುದು ಕಂಡು ಬಂದಿತ್ತು. ಆದರೆ ನೀರು ಹಳದಿ ಆಗಲು ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಚರಂಡಿ ನೀರು, ಶೌಚಾಲಯದ ನೀರು ಇದಕ್ಕೆ ಮಿಶ್ರಣ ಆದರೆ ವಾಸನೆ ಬರುತ್ತದೆ. ಆದರೆ ಈ ನೀರು ಯಾವ ವಾಸನೆಯೂ ಇರಲಿಲ್ಲ. ಹಲವು ಕಡೆಗಳಲ್ಲಿ ಪೈಪ್‌ಲೈನ್‌ ಹೋದ ಜಾಗಗಳನ್ನು ಅಗೆದು ಪರಿಶೀಲಿಸಲಾಯಿತು. ಕೊಳಚೆಯ ಬಳಿ ಇರುವ ನಲ್ಲಿಗಳನ್ನು ಬಂದ್ ಮಾಡಿಸಲಾಯಿತು. ಇವತ್ತು ನೀರು ಹರಿಸಿ ಪರೀಕ್ಷಿಸಿದಾಗ ಹಳದಿ ಬಣ್ಣವಿಲ್ಲದ ನೀರು ಬಂದಿದೆ’ ಎಂದು ಪಾಲಿಕೆಯ ಎಇಇ ವಿನಯ್‌ ತಿಳಿಸಿದರು.

‘ಅಧಿಕಾರಿಗಳು ಬಂದು ಪರೀಕ್ಷೆ ನಡೆಸಿದರು. ಇನ್ನು ಮುಂದೆ ರಾತ್ರಿ ನೀರು ಬಿಡುವುದಿಲ್ಲ. ಹಗಲು ಹೊತ್ತಿನಲ್ಲೇ ನೀರು ಬಿಡುವುದಾಗಿ ಭರವಸೆ ನೀಡಿದರು’ ಎಂದು ಶಿವನಗರದ ಫಜ್ಲುನ್ನಿಸಾ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.