ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ:33 ಅಡಿ ಎತ್ತರದ ಅನ್ನಬ್ರಹ್ಮ ಮೂರ್ತಿ ಅನಾವರಣ

Last Updated 12 ಜುಲೈ 2019, 9:52 IST
ಅಕ್ಷರ ಗಾತ್ರ

ಧಾರವಾಡ: ‘ಇಲ್ಲಿನ ಕೆಲಗೇರಿಯ ಸಾಯಿಬಾಬಾ ಮಂದಿರದಲ್ಲಿ ಜುಲೈ 14ರಂದು ಗುರುಪೂರ್ಣಿಮೆ ಆಚರಣೆಯ ಜತೆಗೆ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ 33 ಅಡಿ ಎತ್ತರದ ಅನ್ನಬ್ರಹ್ಮ ಮೂರ್ತಿ ಅನಾವರಣಗೊಳ್ಳಲಿದೆ’ ಎಂದುಶ್ರೀ ಶಿರಡಿ ಸಾಯಿ ಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ತಿಳಿಸಿದರು.

‘ದೇಶದಲ್ಲೇ ಅತಿ ಎತ್ತರದ ಮೂರ್ತಿ ಎಂದೇ ಹೇಳಲಾಗುತ್ತಿರುವ ಈ ಮೂರ್ತಿಯನ್ನು ಅಹಮದ್‌ನಗರದಲ್ಲಿ ಸಿದ್ಧಪಡಿಸಲಾಗಿದೆ. ಶಿರಡಿಯಲ್ಲಿ ಸ್ಥಾಪಿಸಲಾಗಿರುವ ಅನ್ನಬ್ರಹ್ಮ ಮೂರ್ತಿಯನ್ನು ಸಿದ್ಧಪಡಿಸಿದ ಕಲಾವಿದರೇ ಇದನ್ನೂ ಸಿದ್ಧಪಡಿಸಿದ್ದಾರೆ. ಅಲ್ಲಿಗಿಂತಲೂ ಈ ಮೂರ್ತಿ 3 ಅಡಿ ಎತ್ತರ ಇದೆ. ದೇವಾಲಯದ ಉದ್ಯಾನದಲ್ಲಿ ಕಟ್ಟಡದ ನಿರ್ಮಿಸಿ ಅದರ ಮೇಲೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರ ಸಾನ್ನಿಧ್ಯದಲ್ಲಿಜುಲೈ 14ರಂದು ಬೆಳಿಗ್ಗೆ 10ಕ್ಕೆ ಅನ್ನಬ್ರಹ್ಮ ಮೂರ್ತಿ ಅನಾವರಣಗೊಳ್ಳಲಿದೆ. ಮೂರ್ತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅನಾವರಣಗೊಳಿಸಲಿದ್ದಾರೆ. ಎನ್.ಎಚ್‌.ಕೋನರಡ್ಡಿ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಲಿದೆ’ ಎಂದು ವಿವರಿಸಿದರು.

‘ಅಂದು ಸಂಜೆ 6.30ಕ್ಕೆಸಾಯಿ ಸಚ್ಛರಿತ್ರೆ ಪಾರಾಯಣದ ಮುಕ್ತಾಯ ಸಮಾರಂಭ ನಡೆಯುವುದು. ರಾತ್ರಿ 8ರಿಂದ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಸಾಗರ ಟಿ.ಎಸ್. ಅವರಿಂದ ಸಾಯಿ ಚರಿತ್ರೆ ನೃತ್ಯ ರೂಪಕ ನಡೆಯಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ’ ಎಂದರು.

‘ಜುಲೈ 15ರಂದು ಸಂಜೆ 6.30ಕ್ಕೆ ನಡೆಯುವ ಗುರುಪೂರ್ಣಿಮೆ ಉತ್ಸವದಲ್ಲಿ ಭಜನಾ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಶಿರಡಿಯ ಗಾಯಕ ಪಾರಸ್‌ ಜೈನ್ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ. ಜುಲೈ 16ರಂದು ಬೆಳಿಗ್ಗೆ 9ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಅಂದು ಸಂಜೆ 6.30ಕ್ಕೆ ಮಹಾದ್ವಾರದ ಉದ್ಘಾಟನೆ ಸಮಾರಂಭವು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಬಸವರಾಜ ಹೊರಟ್ಟಿ ಇದನ್ನು ಉದ್ಘಾಟಿಸಲಿದ್ದಾರೆ. ವಿನಯ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಅಂದು ಸಂಜೆ 7.30ಕ್ಕೆ ನಾಟ್ಯ ಸ್ಫೂರ್ತಿ ಕಲ್ಚರಲ್ ಅಕಾಡೆಮಿ ಮತ್ತು ಶಾಂತಲಾ ನೃತ್ಯಾಲಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ. ರಾತ್ರಿ ಶೇಜಾರತಿ ನಡೆಯಲಿದೆ. ಕಾರ್ಯಕ್ರಮ ನಡೆಯುವ ಮೂರು ದಿನಗಳ ಕಾಲ ಪ್ರಸಾದ ವಿತರಣೆ ಇರಲಿದೆ’ ಎಂದು ಮಹೇಶ ಶೆಟ್ಟಿ ತಿಳಿಸಿದರು.

ಉಪಾಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಗುರುಪಾದಯ್ಯ ಹೊಂಗಲಮಠ, ನಾರಾಯಣ ಕದಂ, ಕಿರಣ ಶಾ, ಸುರೇಶ ಹಂಪಿಹೊಳಿ, ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಅಮೃತ ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT