ಮಂಗಳವಾರ, ಜನವರಿ 18, 2022
16 °C

₹ 8 ಕೋಟಿ ವೆಚ್ಚದಲ್ಲಿ ಕಟ್ಟಡ: ಶಾಸಕ ಪ್ರಸಾದ ಅಬ್ಬಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹೊರವಲಯದ ಗಬ್ಬೂರು ಬಳಿ 1 ಎಕರೆ 20 ಗುಂಟೆ ಜಾಗದಲ್ಲಿ ₹8 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಜಿ+1 ಮಾದರಿಯ ಸುಸಜ್ಜಿತ ಕಟ್ಟಡ ಕಾಮಗಾರಿ ಶೀಘ್ರ ಮುಕ್ತಾಯವಾಗಲಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಹೊರವಲಯದ ಗಬ್ಬೂರಿನಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿ ‘ಧಾರವಾಡ ಪೂರ್ವ ಆರ್.ಟಿ.ಒ ಕಚೇರಿ ಸದ್ಯ ಬಾಡಿಗೆ ಕಟ್ಟಡ ಹೊಂದಿದ್ದು, ಶೀಘ್ರ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಹೇಳಿದರು. 

ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಮಾಜಿ ಸದಸ್ಯ ಮೋಹನ ಅಸುಂಡಿ, ಮುಖಂಡರಾದ ಭೀಮಣ್ಣ ಬಡಿಗೇರ, ಮಂಜುನಾಥ ಉಪ್ಪಾರ, ಹಜರತ್ ಮುನ್ಶಿ, ಫರ್ವೇಜ್ ಕೊಣ್ಣೂರು, ಅಜರ್ ಮನಿಯಾರ್, ಕೆ. ದಾಮೋದರ, ಅಧೀಕ್ಷಕ ಸಂಜೀವ್ ಹೊಂಡದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು