ಹುಬ್ಬಳ್ಳಿ: ಹುಬ್ಬಳ್ಳಿ ಅಂಜುಮನ್–ಇ–ಇಸ್ಲಾಂ ಸಂಸ್ಥೆಯ ಮೂರು ವರ್ಷದ ಅಧಿಕಾರ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬಣಕ್ಕೆ ದೊರಕಿದೆ.

ಭಾನುವಾರ ನಡೆದ ಸಂಸ್ಥೆಯ ಚುನಾವಣೆಯಲ್ಲಿ ಆಡಳಿತ ಮಂಡಳಿಯ ಎಲ್ಲ 52 ಸ್ಥಾನಗಳಿಗೆ ಹಿಂಡಸಗೇರಿ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಯೂಸೂಫ್ ಸವಣೂರು ಮತ್ತು ಎ.ಎಂ. ಹಿಂಡಸಗೇರಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಯೂಸೂಫ್ ಅವರು 1275 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಜೀರ್ಅಹ್ಮದ್ ಗದಕರ್ ಅವರು 1899 ಮತಗಳನ್ನು ಪಡೆದರೆ, ಎ.ಎಂ. ಹಿಂಡಸಗೇರಿ ಅವರು 1,890 ಅಧಿಕ ಮತ ಪಡೆದು(3789) ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಸ್ಪಾಕ್ ಕುಮಟಾಕರ್ ಅವರು ಕೇವಲ 130 ಮತಗಳನ್ನು ಪಡೆದರು.

ಶಿಕ್ಷಣ ಮಂಡಳಿ ಸದಸ್ಯರಾಗಿ ಮಹ್ಮದ್ ಅಮೀರ್, ಮಹ್ಮದ್ ಇಲಿಯಾಸ್ ಹಾಶಮ್, ಬಶೀರ್ ಅಹ್ಮದ್ ಗುಡಮಾಲ್, ಸಂಶಿರ್ ಅಹ್ಮದ್ ನಾಯಕವಾಡಿ, ಮಹ್ಮದ್ ಸಲೀಮ್ ಸುಂಡಕೆ, ಖತೀಬ್ ರಿಯಾಜ್ ಅಲ್ಲಾಭಕ್ಷ ಮತ್ತು ನವೀದ್ ಮುಲ್ಲಾ ಆಯ್ಕೆಯಾಗಿದ್ದಾರೆ.

ಆಸ್ಪತ್ರೆ ಮಂಡಳಿ ಸದಸ್ಯರಾಗಿ ಫಾರೂಕ್ ಅಹ್ಮದ್ ಮೌಲಾಸಾಬ್, ದಾವೂದ್ ನದಾಫ್, ಜಹೀರ್ ಅಬ್ಬಾಸ್ ಯರಗಟ್ಟಿ, ಸಿರಾಜ ಅಹ್ಮದ್ ಕುಡಚಿವಾಲೆ ಆಯ್ಕೆಯಾಗಿದ್ದಾರೆ. ಆಜೀವ ಸದಸ್ಯ ಮಂಡಳಿಗೆ 25 ಮಂದಿ ಹಾಗೂ ಪೋಷಕ ಮಂಡಳಿಗೆ 10 ಮಂದಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.