ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಉದ್ಘಾಟನೆ ಬಿಜೆಪಿಯ ಚುನಾವಣೆ ಗಿಮಿಕ್‌: ಸಂತೋಷ್‌ ಲಾಡ್‌

Published 13 ಜನವರಿ 2024, 12:56 IST
Last Updated 13 ಜನವರಿ 2024, 12:56 IST
ಅಕ್ಷರ ಗಾತ್ರ

ಧಾರವಾಡ: ‘ರಾಮಮಂದಿರ ಈಗ ಚುನಾವಣೆ ಗಿಮಿಕ್‌. ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಮಾಡುತ್ತಿರುವ ತಂತ್ರ ಇದು’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಕುಟುಕಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ರಾಮ ಮಂದಿರಕ್ಕೆ ಭೇಟಿ ನೀಡಲು ಆಹ್ವಾನ ಬೇಕೇ? ನನಗೆ ನಿನ್ನೆ ರಾತ್ರಿ ಕನಸಿನಲ್ಲಿ ರಾಮ ದೇವರು ಕಾಣಿಸಿಕೊಂಡಿದ್ದರು. ರಾಜಕೀಯಕ್ಕಾಗಿ ಇಂಥದ್ದನ್ನೆಲ್ಲ ಮಾಡಬೇಡಿ ಎಂದು ಬಿಜೆಪಿಯವರಿಗೆ ಹೇಳುವಂತೆ ಶ್ರೀರಾಮ ತಿಳಿಸಿದರು. ನಾನು ದೇಶದ ಎಲ್ಲರಿಗೂ ಇರುವವ ಎಂದೂ ರಾಮ ಹೇಳಿದರು’ ಎಂದು ಅವರು ತಿಳಿಸಿದರು.

‘ಮಂದಿರ ಕಾಮಗಾರಿ ಪೂರ್ಣ ಆಗುವವರೆಗೆ ಮೂರ್ತಿ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ಶಂಕರಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ರಾಮಮಂದಿರ ಹೋರಾಟದಲ್ಲಿ ನರೇಂದ್ರ ಮೋದಿ ಅವರ ಪಾತ್ರ ಏನಿದೆ ಎಂದೂ ಅವರು ಪ್ರಶ್ನಿಸಿದ್ಧಾರೆ. ಬಿಜೆಪಿಯವರು ಉತ್ತರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT