ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ | ಬಕ್ರೀದ್‌: ಆಡು-ಕುರಿಗಳಿಗೆ ಬೇಡಿಕೆ

ಅಬ್ದುಲರಝಾಕ ನದಾಫ್
Published 12 ಜೂನ್ 2024, 5:53 IST
Last Updated 12 ಜೂನ್ 2024, 5:53 IST
ಅಕ್ಷರ ಗಾತ್ರ

ನವಲಗುಂದ: ಜೂನ್‌ 17 ರಂದು ಬಕ್ರೀದ್‌ ಹಬ್ಬವಿದ್ದು ಮುಸ್ಲಿಂ ಸಮುದಾಯದವರಲ್ಲಿ ಭಾರೀ ಸಿದ್ಧತೆ  ನಡೆದಿದೆ. ಈ ನಿಟ್ಟಿನಲ್ಲಿ ಕುರಿಗಳಿಗೆ ಬೇಡಿಕೆ ಬಂದಿದೆ. ಮಂಗಳವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕುರಿ, ಆಡುಗಳ ಮಾರಾಟ ಜೋರಾಗಿದೆ.

ಹಳ್ಳಿಯಿಂದ ಪಟ್ಟಣಕ್ಕೆ ತರುವ ಆಡು,  ಕುರಿಗಳನ್ನು ಸೂಕ್ತ ಬೆಲೆಗೆ ಮಾರಿ ಸಾಕಾಣೆದಾರರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.  ಈ ಬಾರಿಯಂತೂ ಮನೆಯಲ್ಲಿ ಸಾಕಿದ ಕುರಿ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಕುರಿಗಳನ್ನು ಕೊಂಡೊಯ್ಯಲು ಬೇರೆ ಬೇರೆ ಜಿಲ್ಲೆಗಳಿಂದ ಗ್ರಾಹಕರು ಬರುತ್ತಿದ್ದಾರೆ.  

ಕಳೆದು ತಿಂಗಳು ₹ 7 ಸಾವಿರದಿಂದ ₹ 8 ಸಾವಿರವರೆಗೆ ಮಾರಾಟವಾಗಿದ್ದ ಕುರಿಗಳು ಈ ವಾರ ₹ 40 ಸಾವಿರದಿಂದ ₹ 45 ಸಾವಿರವರೆಗೆ ಮಾರಾಟವಾಗಿವೆ. ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಆಗಮಿಸಿ ಇಲ್ಲಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಿಟ್ಟಿಸಿಕೊಳ್ಳುತ್ತಿದ್ದಾರೆ.  

ಕುರಿಗಳ ಸಂತೆಯಲ್ಲಿ ಎಷ್ಟೇ ದರವಿದ್ದರೂ ಖರೀದಿದಾರರು  ಖರೀದಿಸುತ್ತಿದ್ದಾರೆ. ಒಟ್ಟಿನಲ್ಲಿ ತ್ಯಾಗ, ಬಲಿದಾನದ ಸಂಕೇತವಾಗಿ ನಡೆಸುವ ಬಕ್ರೀದ್‌ ಹಬ್ಬದ ಹಿನ್ನೆಲೆ ಆಡು-ಕುರಿ ವ್ಯಾಪಾರಿಗಳಿಗೆ  ಲಾಭವನ್ನು ತಂದುಕೊಟ್ಟಿದೆ. 

ಗೋಹತ್ಯೆ ನಿಷೇಧ ಕಾನೂನು: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ ಜಾರಿಯಾಗಿದೆ. ದನ, ಎತ್ತು, ಕೋಣಗಳ ಬಲಿ ಕೊಡುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ಬಕ್ರೀದ್‌ ಸಂದರ್ಭ ದನ, ಎತ್ತು ಖರೀದಿ ಮಾಡುತ್ತಿದ್ದ ಹೆಚ್ಚಿನವರು ಈ ಬಾರಿ ಆಡು, ಕುರಿ ಖರೀದಿಸುವುದರಿಂದ ಬೇಡಿಕೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಒಂದೂವರೆ ತಿಂಗಳ ಹಿಂದೆ ಇದೆ ಕುರಿ ಮಾರಾಟ ಮಾಡಲು ಬಂದಿದ್ದೆ ₹ 7600 ಕೇಳಿದ್ದರು ನಾನು ಮಾರಾಟ ಮಾಡದೇ ವಾಪಾಸ್ ಹೋಗಿದ್ದೆ ಈ ವಾರ ನನ್ನ ಕುರಿ ₹34400 ರೂ ಮಾರಾಟವಾಗಿದೆ. 
ಅರುಣ ಹಿರೇಗೌಡ್ರ, ಕುರಿ ಮಾರಲು ಬಂದ ರೈತ.
ಕುರಿಗಳ ಬೆಲೆ ಗಗನಕ್ಕೆರಿದೆ ಆ ದರದಲ್ಲಿ ಖರೀದಿಸಿ ಮಾರಾಟ ಮಾಡಲು ಆಗುವುದಿಲ್ಲ. ಪ್ರತಿವಾರ 10–20 ಕುರಿ ಖರೀದಿಸುತ್ತಿದ್ದೆ ಈ ವಾರ ಒಂದು ಖರೀದಿಸದೆ ವಾಪಾಸ್ ಬಂದಿದ್ದೇನೆ.
ಕುಮಾರ ಕಲಾಲ್, ಮಟನ್ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT