ಧಾರವಾಡ: ‘ಬಸವಣ್ಣನವ ಜೀವನ ಚರಿತ್ರೆಯನ್ನು ಯುವಜನರಿಗೆ ತಿಳಿಸಬೇಕು. ಅವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಾಹಿತಿ ವಿನಯಾ ಒಕ್ಕುಂದ ಹೇಳಿದರು.

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಬುಧವಾರ ನಡೆದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ, ಮಹಿಳಾ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಮೇಲು–ಕೀಳು ತೊಡೆದುಹಾಕಿ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಹೋರಾಡಿದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಮಾತನಾಡಿ, ‘ಬಸವಣ್ಣನವರ ವಚನ ಮತ್ತು ಅವರ ತತ್ವಗಳನ್ನು ಪ್ರಚುರಪಡಿಸಲು ಸಂಸ್ಥೆ ಬದ್ದವಾಗಿದೆ’ ಎಂದು ಹೇಳಿದರು.

ರಂಗೋಲಿ ಮತ್ತು ವಚನಗಾಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ವಿ.ಹಿ.ಬಿ. ಯಳಲ್ಲಿ, ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ, ಪ್ರಾಚಾರ್ಯ ಎಸ್.ಎಂ. ಬಮ್ಮನಗೌಡರ, ಸವಿತಾ ಪಾಟೀಲ, ಶಿವಲಿಂಗ ನೀಲಗುಂದ ಪಾಲ್ಗೊಂಡಿದ್ದರು.

‘ಸಮಾನತೆ ಸಾರಿದ ಮಾನವತಾವಾದಿ’

ಧಾರವಾಡ: ‘12ನೇ ಶತಮಾನದಲ್ಲೇ ಬಸವಣ್ಣನವರು ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ವಚನಗಳ ಮೂಲಕ ನೀಡಿದರು. ಜಾತಿರಹಿತ ಸಮಾಜ ನಿರ್ಮಿಸಲು ಯತ್ನಿಸಿದರು’ ಎಂದು ಜೆಎಸ್ಎಸ್ ಕಾರ್ಯದರ್ಶಿ ಅಜಿತ ಪ್ರಸಾದ ಹೇಳಿದರು.

ಇಲ್ಲಿನ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಬಸವಣ್ಣನವರು ಮೂಢನಂಬಿಕೆ ತೊಡೆದುಹಾಕಲು ಶ್ರಮಿಸಿದರು. ಸಮಾಜದಲ್ಲಿ ಸಮಾನತೆ, ಭ್ರಾತೃತ್ವ ವಿಚಾರಗಳನ್ನು ಎತ್ತಿ ಹಿಡಿದ ಮಾನವತಾವಾದಿ ಅವರು’ ಎಂದರು.

ಬಸವಣ್ಣನವರ ಜೀವನ ಮತ್ತು ಕಾಯಕ, ದಾಸೋಹ ತತ್ವಗಳ ಕುರಿತು ಮಹಾಂತ ದೇಸಾಯಿ ಉಪನ್ಯಾಸ ನೀಡಿದರು. ಆರ್.ವಿ. ಚಿಟಗುಪ್ಪಿ, ಶ್ರೀಕಾಂತ ರಾಗಿಕಲ್ಲಾಪುರ, ರೋನಿಲ ಮನೋಹರ, ಎನ್. ಜಿ. ಪುಡಕಲಕಟ್ಟಿ, ಅವಿನಾಶ ಹೊಳಿಹೊಸುರ, ನವೀನ ಬಡಿಗೇರ, ಶಿಲ್ಪಾ ನಾಯಕ ಇದ್ದರು.

‘ಶರಣರ ತತ್ವ ಅಳವಡಿಸಿಕೊಳ್ಳಿ’

ಧಾರವಾಡ: ‘ಬಸವಣ್ಣ ಹಾಗೂ ಶರಣರ ವಚನಗಳನ್ನು ಓದಬೇಕು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಮನುಕುಲದ ನೆಮ್ಮದಿಯ ಬದುಕಿಗೆ ಬಸವಣ್ಣನವರು ಹಾಕಿಕೊಟ್ಟ ಮಾರ್ಗ ಮತ್ತು ಸೂತ್ರಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂಥವು. ಯುವಜನರಿಗೆ ಅವರ ವಚನಗಳು ದಾರಿದೀಪವಾಗಿವೆ’ ಎಂದರು.

ನಾಗಭೂಷಣ ಬಸವಲಿಂಗಯ್ಯ ಹಿರೇಮಠ ವಚನಗಳನ್ನು ಹಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಮಹೇಶ ಧ. ಹೊರಕೇರಿ, ಜಿನದತ್ತ ಹಡಗಲಿ, ವಿಶ್ವೇಶ್ವರಿ ಬ.ಹಿರೇಮಠ, ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಎಲ್.ಐ. ಲಕ್ಕಮ್ಮನವರ ಇದ್ದರು.

ಮೆರುಗು ತಂದ ರಂಗ ತೇರು

ಧಾರವಾಡ: ರಂಗಾಯಣವು ‘ನಮ್ಮ ಸಂವಿಧಾನ ನಮ್ಮ ಕಲರವ’ ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಿದ್ದ ‘ರಂಗಾಯಣ ತೇರಿ’ಗೆ ರಂಗನಿರ್ದೇಶಕ ಬಿ.ಐ. ಈಳಿಗೇರ ಅವರು ಬುಧವಾರಚಾಲನೆ ನೀಡಿದರು. ಡೊಳ್ಳು ಜಗ್ಗಲಗಿ ಕರಡಿ ಮಜಲುಗಳೊಂದಿಗೆ ಮಕ್ಕಳೇ ಬಸವಣ್ಣನವರ ಘೋಷವಾಕ್ಯಗಳನ್ನು ಕೂಗುತ್ತಾ ಸಾಗಿದರು. ರಂಗಾಯಣದಿಂದ ಕೋರ್ಟ್ ವೃತ್ತ ಜುಬಿಲಿ ವೃತ್ತ ಮಾರ್ಗವಾಗಿ ಕಡಪಾ ಮೈದಾನದವರೆಗೆ ಮೆರವಣಿಗೆ ನಡೆಸಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ರಂಗಾಯಣಕ್ಕೆ ತೇರು ಮರಳಿತು. ಮಕ್ಕಳು ಹಾಡುತ್ತಾ ಕುಣಿಯುತ್ತ ತೇರನ್ನು ಎಳೆದು ಮೆರುಗು ನೀಡಿದರು. ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ರಂಗನಿರ್ದೇಶಕ ಪ್ರಭು ಹಂಚಿನಾಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ಪಾಲ್ಗೊಂಡಿದ್ದರು.

ರಕ್ತದಾನ ಶಿಬಿರ

ಧಾರವಾಡ: ‘ಬಸವೇಶ್ವರರು ಜಾತಿರಹಿತ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ಸುವರ್ಣಾ ಬಿರಾದಾರ ಹೇಳಿದರು. ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬುಧವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ‘12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ತಳ ಸಮುದಾಯವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ವಚನಗಳ ಮೂಲಕ ಸಮಾಜದ ಅಂಕು–ಡೊಂಕು ತಿದ್ದಿದರು’ ಎಂದರು.

ಮಹಾಸಭಾದ ಅಧ್ಯಕ್ಷ ಪ್ರದೀಪ ಎಂ. ಪಾಟೀಲ ಎಂ.ಎಸ್. ಶಿರಿಯಣ್ಣವರ ಮಾತನಾಡಿದರು. ರೋಟರಿ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಸವಿತಾ ಅಮರಶೆಟ್ಟಿ ಸುಧಾ ಕಬ್ಬೂರ ಪ್ರಜ್ಞಾ ನಡಕಟ್ಟಿ ಪ್ರೊ. ವಿ.ಸಿ. ಸವಡಿ ಚಂದ್ರಶೇಖರ ಮನಗುಂಡಿ ಶಿವಶರಣ ಕಲಬಶೆಟ್ಟರ ಬಿ.ಎಸ್. ಗೋಲಪ್ಪನವರ ರಾಜಶೇಖರ ಉಪ್ಪಿನ ಪ್ರೊ. ಶಂಭು ಹೆಗಡಾಳ ವಿಶ್ವನಾಥ ಅಂಗಡಿ ಎನ್.ಎಸ್. ಬಿರಾದಾರ ಬಸವರಾಜ ಮೇಸ್ತ್ರಿ ಮಹೇಶ ಬಿಳೆಹಾಳ ಆನಂದ ಗಡೇಕಾರ ನಾಗೇಶ ಕುಸುಗಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.